ಇಂದ್ರಜಿತ್ ಭೇಟಿಯ ಫೋಟೋ ವೈರಲ್‌ ಬಗ್ಗೆ ಕುಮಾರಸ್ವಾಮಿ ಸ್ಪಷ್ಟನೆ

Jul 16, 2021, 4:37 PM IST

ಬೆಂಗಳೂರು, (ಜುಲೈ.16): ಇಂದ್ರಜಿತ್ ಲಂಕೇಶ್ ಜೊತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಫೋಟೊ ವೈರಲ್ ಆಗಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ಬೆಂಗಳೂರಿನಲ್ಲಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. 

ದರ್ಶನ್ ಮೇಲೆ ಹಲ್ಲೆ ಆರೋಪ: ಹೈ ಪ್ರೊಫೈಲ್ ಕೇಸ್‌ಗಳಲ್ಲಿ ಕಾಣಿಸಿಕೊಳ್ಳೋದೇಕೆ ಇಂದ್ರಜಿತ್..?

ಯಾಕೆ ಈ ಫೊಟೊ ವೈರಲ್ ಮಾಡುತ್ತಿದ್ದಾರೆ ಗೊತ್ತಿಲ್ಲ. ಪ್ರತೀ ದಿನ ನನ್ನನ್ನು ನೂರಾರು ಜನ ಭೇಟಿ ಮಾಡುತ್ತಾರೆ. ನನ್ನ ಜೊತೆ ಫೋಟೋ ತೆಗೆದುಕೊಳ್ಳುತ್ತಾರೆ. ಆದರೆ ಇತ್ತೀಚಿಗೆ ನನ್ನನ್ನು ಇಂದ್ರಜಿತ್ ಭೇಟಿ ಮಾಡಿಲ್ಲ. ಯಾಕೆ ನನ್ನ ಹೆಸರು ತಳುಕು ಹಾಕಿಕೊಂಡಿದ್ದಿರಾ ಎಂದು ಅವರು ಪ್ರಶ್ನಿಸಿದ್ದಾರೆ.