Cover Story Impact: ಮಾತು ತಪ್ಪದ ಸಿಎಂ ಬೊಮ್ಮಾಯಿ: 400ಕ್ಕೂ ಹೆಚ್ಚು ಅಧಿಕಾರಿಗಳ ವರ್ಗಾವಣೆ

Dec 21, 2022, 2:27 PM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತುಕೊಟ್ಟಂತೆ ನಡೆದಿದ್ದು, ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಬಹುದೊಡ್ಡ ವರ್ಗಾವಣೆ ಮಾಡಲಾಗಿದೆ. ಈ ಬಹುದೊಡ್ಡ ವರ್ಗಾವಣೆ ಕಾರಣ ವಾದ ಕವರ್ ಸ್ಟೋರಿ. ವಾಣಿಜ್ಯ ಇಲಾಖೆಯ ಲಂಚಾಸುರರಿಗೆ ಬಿಗ್‌ ಶಾಕ್‌ ಕೊಟ್ಟು, 18ಅಧಿಕಾರಿಗಳು ಒಟ್ಟಿಗೆ ಅಮಾನತಾಗಿರುವುದು ದೊಡ್ಡ ದಾಖಲು. ನವೆಂಬರ್‌ 25ರಂದು ಮಹಾಭೇಟೆ ಹೆಸರಿನಲ್ಲಿ ವರದಿ ಪ್ರಸಾರವಾಗಿತ್ತು. ಒಂದೇ ಕಡೆ ಇರೋರನ್ನ ವರ್ಗಾ ಮಾಡೋದಾಗಿ ಹೇಳಿದ್ದ ಸಿಎಂ, ಹೇಳಿದಂತೆ 400 ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಆಗಬೇಕಿದ್ದ ವರ್ಗಾವಣೆ, ಸುವರ್ಣ ವರದಿಯಿಂದ ಫಸ್ಟ್ ಟೈಮ್ ಡಿಸೆಂಬರ್‌'ನಲ್ಲಿ ಆಗಿದೆ. ಸಾಮಾನ್ಯವಾಗಿ 50-60 ಜನರು ವರ್ಗಾವಣೆಯಾಗುತ್ತಿದ್ದಲ್ಲಿ,‌ 400ಕ್ಕೂ ಹೆಚ್ಚು ಜನರನ್ನು ವರ್ಗಾವಣೆ ಮಾಡಲಾಗಿದೆ. ಇದು ಅತಿ ದೊಡ್ಡ ವರ್ಗಾವಣೆಯಾಗಿದೆ.

Assembly election: ಕಾಂಗ್ರೆಸ್‌ ಟಿಕೆಟ್‌ ಹಂಚಿಕೆಗೆ ಅಂತಿಮ ಮಾರ್ಗಸೂಚಿ ಬಿಡುಗಡೆ ಮಾಡಿದ ಕೆಪಿಸಿಸಿ