71 ಪೈಸೆಯ ಷೇರು ₹174, 1 ಲಕ್ಷ ಈಗ 2.5 ಕೋಟಿ ರೂಪಾಯಿ ಆಯ್ತು; ಝಣ ಝಣ ಕಾಂಚಾಣ

By Mahmad RafikFirst Published Nov 5, 2024, 7:57 PM IST
Highlights

ಸಿಸ್ಟಮ್ಯಾಟಿಕ್ಸ್ ಕಾರ್ಪೊರೇಟ್ ಸರ್ವೀಸಸ್‌ನ ಷೇರು 8 ವರ್ಷಗಳಲ್ಲಿ 14 ಪಟ್ಟು ಹೆಚ್ಚು ಲಾಭ ಕೊಟ್ಟಿದೆ. ಈ ಕಂಪನಿ ಯಾವೆಲ್ಲಾ ಸೇವೆ ಕೊಡುತ್ತೆ ಎಂಬುದರ ಮಾಹಿತಿ ಇಲ್ಲಿದೆ.

ಮುಂಬೈ: ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ಮಾರುಕಟ್ಟೆಯಲ್ಲಿನ ಬದಲಾವಣೆಯ ಅಪಾಯವನ್ನು ಒಳಗೊಂಡಿರುತ್ತವೆ. ಹಣ ಹಾಕಿದ ಕೂಡಲೇ ಲಾಭ ಬರಲ್ಲ. ಅದಕ್ಕಾಗಿ ತಾಳ್ಮೆ ಜೊತೆಯೆ ಅದೃಷ್ಟವೂ ಬೇಕು ಎಂಬುವುದು ಹಲವರ ಅಭಿಪ್ರಾಯ. ಹಾಗೆಯೇ ಹಣ ಎಲ್ಲಿ ಹೂಡಿಕೆ ಮಾಡಬೇಕು ಮತ್ತು ಮಾರುಕಟ್ಟೆಯಲ್ಲಾಗುವ ಸಣ್ಣ ಬದಲಾವಣೆಗಳನ್ನು ಸಹ ಹೂಡಿಕೆದಾರರು ಗಮನಿಸಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ಕೆಲವು ಷೇರುಗಳು ಅಲ್ಪಾವಧಿಯಲ್ಲಿ ಹೂಡಿಕೆದಾರರನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡಿವೆ. ಹೂಡಿಕೆದಾರರನ್ನು ಕಡಿಮೆ ಸಮಯದಲ್ಲಿ ಕೋಟ್ಯಧಿಪತಿಗಳನ್ನಾಗಿ ಮಾಡಿದ ಷೇರುಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಅಂತಹುವುದೇ ಒಂದು ಷೇರು ಸಿಸ್ಟಮ್ಯಾಟಿಕ್ಸ್ ಕಾರ್ಪೊರೇಟ್ ಸರ್ವೀಸಸ್ ಲಿಮಿಟೆಡ್‌. ಈ ಷೇರು ಅಲ್ಪಾವಧಿಯಲ್ಲಿಯೇ ಹೂಡಿಕೆದಾರರಿಗೆ ನಿರೀಕ್ಷೆಗಿಂತ ಒಳ್ಳೆಯ ರಿಟರ್ನ್ ನೀಡಿದೆ.

8 ವರ್ಷಗಳ ಹಿಂದೆ ಅಂದ್ರೆ 2016ರಲ್ಲಿ ಸಿಸ್ಟಮ್ಯಾಟಿಕ್ಸ್ ಕಾರ್ಪೊರೇಟ್ ಸರ್ವೀಸಸ್ ಲಿಮಿಟೆಡ್‌ನ ಒಂದು ಷೇರಿನ ಬೆಲೆ 12 ರೂಪಾಯಿ ಆಗಿತ್ತು. ಆದ್ರೆ ಈಗ ಸಿಸ್ಟಮ್ಯಾಟಿಕ್ಸ್ ಕಾರ್ಪೊರೇಟ್ ಸರ್ವೀಸಸ್ ಲಿಮಿಟೆಡ್‌ ಷೇರು ಬೆಲೆ 172.80 ರೂಪಾಯಿ ಆಗಿದ್ದು, 8 ವರ್ಷಗಳಲ್ಲಿ ಇದರ ಮೌಲ್ಯ 14 ಪಟ್ಟು ಹೆಚ್ಚು ಲಾಭವನ್ನು ಹೂಡಿಕೆದಾರರಿಗೆ ನೀಡಿದೆ. 

Latest Videos

ಇದನ್ನೂ ಓದಿ:ಫುಡ್ ಆರ್ಡರ್ ಮಾಡಿದ ಗ್ರಾಹಕರಿಗೆ ಅಚ್ಚರಿ, ಡೆಲಿವರಿಗೆ ಬಂದ ಜೊಮ್ಯಾಟೋ ಸಿಇಒ & ಪತ್ನಿ!

ಸಿಸ್ಟಮ್ಯಾಟಿಕ್ಸ್ ಕಾರ್ಪೊರೇಟ್ ಸರ್ವೀಸಸ್ ಲಿಮಿಟೆಡ್‌ನ ಷೇರಿನ ಆಲ್‌ಟೈಮ್ ಕಡಿಮೆ ಬೆಲೆ ಕೇವಲ 71 ಪೈಸೆ ಆಗಿತ್ತು. ಈ ಬೆಲೆಯಲ್ಲಿ ಯಾರಾದ್ರೂ ಅಂದು 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ, ಇಂದಿನ ದಿನಕ್ಕೆ ಖರೀದಿಸಿದ ಷೇರು ಮತ್ತು ಹೂಡಿಕೆಯ ಮೌಲ್ಯ 2.5 ಕೋಟಿ ರೂಪಾಯಿ ಆಗುತ್ತಿತ್ತು. ನವೆಂಬರ್ 5ರಂದು ಷೇರಿನ ಎಕ್ಸ್-ಸ್ಪ್ಲಿಟ್ ದಿನಾಂಕವಾಗಿದೆ. ಇದರೊಂದಿಗೆ ಷೇರಿನ ಮುಖಬೆಲೆ ಈಗ ₹ 1 ಆಗಿದೆ.

ಸಿಸ್ಟಮ್ಯಾಟಿಕ್ಸ್ ಕಾರ್ಪೊರೇಟ್ ಸರ್ವೀಸಸ್ ಲಿಮಿಟೆಡ್‌ನ ಷೇರಿನ 52 ವಾರಗಳಲ್ಲಿ ಕಡಿಮೆ ಬೆಲೆ 38.51 ರೂಪಾಯಿ ಮತ್ತು ಅಧಿಕ ಬೆಲೆ 202.10 ರೂಪಾಯಿ ಆಗಿದೆ. ಸದ್ಯ ಕಂಪನಿಯ ಮಾರುಕಟ್ಟೆ ಬಂಡವಾಳ 223 ಕೋಟಿ ರೂಪಾಯಿ ಆಗಿದೆ.

ಸಿಸ್ಟಮ್ಯಾಟಿಕ್ಸ್ ಕಾರ್ಪೊರೇಟ್ ಸರ್ವೀಸಸ್ ಏನು ಮಾಡುತ್ತದೆ?
1958ರಲ್ಲಿ ಸ್ಥಾಪನೆಯಾದ ಸಿಸ್ಟಮ್ಯಾಟಿಕ್ಸ್ ಕಾರ್ಪೊರೇಟ್ ಸರ್ವೀಸಸ್,  ಅಂಗಸಂಸ್ಥೆ ಸಿಸ್ಟಮ್ಯಾಟಿಕ್ಸ್ ಫಿನ್‌ಕಾರ್ಪ್ ಇಂಡಿಯಾ ಲಿಮಿಟೆಡ್ ಮೂಲಕ ಭಾರತದಲ್ಲಿ ಬ್ಯಾಂಕೇತರ ಹಣಕಾಸು ಕಂಪನಿಯಾಗಿ ಕಾರ್ಯನಿರ್ವಹಿಸುತ್ತದೆ. ಪ್ರಧಾನ ಕಚೇರಿ ಇಂದೋರ್ ನಗರದಲ್ಲಿದ್ದು, ಸದ್ಯ 115 ನಗರಗಳಲ್ಲಿ 453 ಟಚ್‌ ಪಾಯಿಂಟ್ ಹೊಂದಿದೆ. ಮರ್ಚೆಂಟ್ ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಹೂಡಿಕ, ನಿರ್ವಹಣೆ ಸೇವೆಯನ್ನು ಸಹ ನೀಡುತ್ತದೆ. ಪೋರ್ಟ್‌ಫೋಲಿಯೊ ಸರ್ವಿಸ್,  ಮ್ಯೂಚುವಲ್ ಫಂಡ್, ಇ-ಬ್ರೋಕಿಂಗ್ ಸರ್ವಿಸ್ ಒದಗಿಸುತ್ತದೆ. 

ಇದನ್ನೂ ಓದಿ: ಇನ್ಫೋಸಿಸ್‌, ರಿಲಾಯನ್ಸ್ ಸೇರಿ 6 ಕಂಪೆನಿಗೆ ಷೇರುಪೇಟೆಯಲ್ಲಿ ನಷ್ಟ, ಯಾರು ಎಷ್ಟು ಸಾವಿರ ಕೋಟಿ ಕಳಕೊಂಡ್ರು?

click me!