ಹೆಚ್ಚಾಗುತ್ತಿದೆ ಕೊರೊನಾ; ಬೆಂಗಳೂರಿನಿಂದ ವಲಸೆ ತಡೆಗೆ ಇದೊಂದೇ ಮಾರ್ಗೋಪಾಯ

Jul 11, 2020, 5:36 PM IST

ಬೆಂಗಳೂರು (ಜು. 11): ಸಿಲಿಕಾನ್ ಸಿಟಿಯಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿದೆ. ಈ ಹೆಚ್ಚಳಕ್ಕೆ ಅನಿಯಂತ್ರಿತ ವಲಸೆಯೇ ಕಾರಣ ಎಂದು ಟಾಸ್ಕ್ ಫೋರ್ಸ್ ತಜ್ಞರು ವರದಿ ನೀಡಿದ್ದಾರೆ. ಅನಿಯಂತ್ರಿತ ವಲಸೆಯನ್ನು ತಪ್ಪಿಸಿ ಎಂದು ಸಲಹೆ ನೀಡಿದೆ.  ಈ ವರದಿಯಿಂದ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ.

ಲಾಕ್‌ಡೌನ್ ಫಿಕ್ಸಾ? ಕುತೂಹಲ ಮೂಡಿಸಿದೆ ಸಂಸದ, ಕಾರ್ಪೋರೇಟರ್‌ಗಳ ಜೊತೆ ಸಿಎಂ ಸಭೆ

ಅನಿಯಂತ್ರಿಕ ವಲಸೆ ತಡೆಗೆ ಮನವೊಲಿಕೆಯೊಂದೇ ಪರಿಹಾರ. ನಾಯಕರು ತಮ್ಮ ಕ್ಷೇತ್ರದ ಜನರ ಬಗ್ಗೆ ಜಾಗೃತಿ ಮೂಡಿಸಬೇಕು. ಇದೊಂದೇ ಸದ್ಯಕ್ಕಿರುವ ಮಾರ್ಗೋಪಾಯವಾಗಿದೆ. ಅಂತರ್‌ ಜಿಲ್ಲಾ ಪ್ರಯಾಣವನ್ನು ತಡೆದರೆ ಆರ್ಥಿಕ ಹೊಡೆತ ಉಂಟಾಗುತ್ತದೆ. ಹಾಗಾಗಿ ನಿರ್ಬಂಧ ಹೇರಲು ಆಗುವುದಿಲ್ಲ. ವಲಸಿಗರ ಮನವೊಲಿಕೆಯೊಂದೇ ಇದಕ್ಕೆ ಪರಿಹಾರ ಎಂಬ ಅಭಿಪ್ರಾಯಕ್ಕೆ ಸರ್ಕಾರ ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!