Dec 8, 2020, 3:08 PM IST
ಬೆಂಗಳೂರು (ಡಿ. 08): ಮೌರ್ಯ ಸರ್ಕಲ್‌ನಿಂದ ಟೌಲ್‌ಹಾಲ್ ಕಡೆ ಜಾಥಾ ಹೊರಡಲು ಹೋರಾಟಗಾರರು ತಯಾರಾಗಿದ್ದರು. ಆದರೆ ಪೊಲೀಸರು ಅದಕ್ಕೆ ಅವಕಾಶ ಕೊಡಲಿಲ್ಲ. ಅವಕಾಶ ಮಾಡಿಕೊಡಿ ಅಂತ ಪೊಲೀಸರ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತಾರೆ. ರೈತ ಪರ ಹೋರಾಟಗಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ರೈತರೊಬ್ಬರು ಅಸ್ವಸ್ಥರಾಗಿ ಕೆಳಗೆ ಬೀಳುತ್ತಾರೆ.
'ಅದಾನಿ, ಅಂಬಾನಿ ಮನೆಯಲ್ಲಿ ತಯಾರಾದ ಬಿಲ್ ತಂದು ಪಾರ್ಲಿಮೆಂಟಲ್ಲಿ ಪಾಸ್ ಮಾಡೋದು ಸರಿಯಲ್ಲ'
ಇನ್ನೊಂದು ಕಡೆ ಈ ಪ್ರತಿಭಟನೆಗೆ ಕಾಂಗ್ರೆಸ್ ನಾಯಕರು ಸಾಥ್ ನೀಡಿದ್ದಾರೆ. ಡಿಕೆ ಶಿವಕುಮಾರ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.