ತೆಲುಗು ಸ್ಟಾರ್ ನಾಗ ಚೈತನ್ಯ (Naga Chaithanya) ಹಾಗೂ ಶೋಭಿತಾ ಧೂಳಿಪಾಲ ವಿವಾಹದ ನಂತರ ನಾಗ ಚೈತನ್ಯ ಹಾಗೂ ಸಮಂತಾ ಜೊತೆಗೆ ನಾಗಾರ್ಜುನ ಮತ್ತು ಸಮಂತಾ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇದಕ್ಕೆ ಕಾರಣ ಏನು ಅನ್ನೋದು ನಿಮಗೂ ಗೊತ್ತಿದೆ. ಸಮಂತಾ ಜೊತೆಗಿನ ನಾಗಾರ್ಜುನ ಸಂಬಂಧ ಹಾಗಿತ್ತು. ಇಬ್ಬರು ಅಪ್ಪ - ಮಗಳಂತೆ ಯಾವಾಗ್ಲೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು.
ಸಮಂತಾ ಮತ್ತು ನಾಗಾರ್ಜುನ್ (Akkineni Nagarjuna) ಹಲವಾರು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಅದು ಮನೆಯಲ್ಲಿ ಗಾರ್ಡಾನಿಂಗ್ ಮಾಡೋದು ಇರಬಹುದು, ಚಾರಿಟಿ ಕೆಲಸ ಇರಬಹುದು. ಅಥವಾ ಇನ್ನಿತರ ಕಾರ್ಯಕ್ರಮಗಳಲ್ಲಿ ಸಮಂತಾ ಮತ್ತು ನಾಗಾರ್ಜುನರ ಬಾಂಡಿಂಗ್ ನಾವು ಕಂಡಿದ್ದೇವೆ. ಸಮಂತಾ, ನಾಗಾರ್ಜುನ ಅವರನ್ನು ಪ್ರೀತಿಯಿಂದ ಮಾವಯ್ಯ ಅಂತಾನೆ ಕರೆಯುತ್ತಿದ್ದರು. ಮದುವೆ ಸಮಯದಲ್ಲೂ ನಾಗಾರ್ಜುನ ಅವರನ್ನ ಗಟ್ಟಿಯಾಗಿ ಹಿಡಿದು, ಸಮಂತಾ ತೆಗೆಸಿಕೊಂಡಿದ್ದ ಫೋಟೊಗಳನ್ನು ನೋಡಿದ್ರೆ, ಇವರಿಬ್ಬರ ಬಾಂಡಿಂಗ್ ಎಂತದ್ದು ಅನ್ನೋದು ಗೊತ್ತಾಗುತ್ತಿತ್ತು.
ನಾಗ ಚೈತನ್ಯ ಜೊತೆಗಿನ ಮದುವೆಗೂ ಮೊದಲಿನಿಂದಲೇ ನಾಗಾರ್ಜುನ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದರು ಸಮಂತಾ (Samantha Ruth Prabhu), ತಮ್ಮ ಮಾವನ ಜೊತೆಗೆ ನಾಗಚೈತನ್ಯರ ಎಕ್ಸ್ ಗರ್ಲ್ ಫ್ರೆಂಡ್ಸ್ ಕುರಿತು ಕೂಡ ನಟಿ ಮಾತನಾಡಿದ್ದು ಇದೆಯಂತೆ. ಅಷ್ಟೇ ಅಲ್ಲ ಹಲವಾರು ಕಾರ್ಯಕ್ರಮಗಳಲ್ಲೂ ಸಹ ಸಮಂತಾ, ತಮ್ಮ ಮಾವನ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದು ಇದೆ, ಆಕೆ ಎಷ್ಟು ಗೌರವ ಕೊಡುತ್ತಿದ್ದಳು ಅನ್ನೋದು ಸಹ ಗೊತ್ತಿದೆ.
ಸಮಂತಾ ಮತ್ತು ನಾಗಾರ್ಜುನ ಅಸಾಧಾರಣ ಮತ್ತು ಆಳವಾದ ಸಂಬಂಧವನ್ನು ಹೊಂದಿದ್ದರು, ಅದು ಇತರರಿಗಿಂತ ಭಿನ್ನವಾಗಿತ್ತು. ನಾಗಾರ್ಜುನ ಸಮಂತಾಳನ್ನು ತಮ್ಮ ಮಗಳು ಅಂತಾನೇ ಹೇಳುತ್ತಿದ್ದರು. ಸಮಂತಾ ಯಾವಾಗ್ಲೂ ತಮ್ಮ ಮಾವ ಹ್ಯಾಂಡ್ಸಮ್ ಅಂತ ಹೇಳ್ತ ಇದ್ದಿದ್ದನ್ನು ಇಂದಿಗೂ ಫ್ಯಾನ್ಸ್ ನೆನೆಪಿಸಿಕೊಳ್ಳುತ್ತಾರೆ. ಇಬ್ಬರ ನಡುವೆ ಸ್ಟ್ರಾಂಗ್, ಪ್ರೊಟೆಕ್ಟಿವ್ ಹಾಗೂ ವಾತ್ಸಲ್ಯ ತುಂಬಿದ ಸಂಬಂಧ ಇತ್ತು. ಮಗನ ಜೊತೆಗಿನ ಡಿವೋರ್ಸ್ ಬಳಿಕ ನಾಗಾರ್ಜುನ ನೊಂದಿದ್ದರು. ಆದರೆ ನಂತರವೂ ಸಮಂತಾ ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಆಕೆಯನ್ನು ಭೇಟಿಯಾಗಬೇಕೆಂದು ಸಹ ಹೇಳಿದ್ದರು.
ಇನ್ನು ಸಮಂತಾ ಮತ್ತು ನಾಗಾರ್ಜುನ ಸಿನಿಮಾಗಳಲ್ಲೂ ಜೊತೆಯಾಗಿ ನಟಿಸಿದ್ದಾರೆ. ಹಾಗಾಗಿ ಇಬ್ಬರ ಭಾಂದವ್ಯ ಸ್ಟ್ರಾಂಗ್ ಆಗಿತ್ತು. ಮನಂ, ರಾಜು ಗಾರಿ ಗಧಿ 2, ಮನ್ಮಥಡು 2 ಸಿನಿಮಾಗಳಲ್ಲಿ ಇವರು ಜೊತೆಯಾಗಿ ನಟಿಸಿದ್ದರು. ಅಂದು ಸಮಂತಾ ಜೊತೆಗೆ ನಾಗಾರ್ಜುನ ಬಾಂಡಿಂಗ್ ಹೇಗಿತ್ತೋ? ಇಂದು ಶೋಭಿತಾ ಜೊತೆಗೂ ಅದೇ ರೀತಿಯ ಉತ್ತಮ ಬಾಂಧವ್ಯ ಹೊಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಾರ್ಯಕ್ರಮಗಳಲ್ಲಿ ನಾಗಾರ್ಜುನ ಮುಂದೆ ಬಂದು ತಮ್ಮ ಸೊಸೆಯನ್ನು ಪರಿಚಯಿಸುತ್ತಿದ್ದಾರೆ. ನಾಗಚೈತನ್ಯ ಮತ್ತು ಶೋಭಿತಾ (Shobhita Dhulipala) ಮೊದಲ ದೇವಸ್ಥಾನ ದರ್ಶನ ಸಂದರ್ಭದಲ್ಲೂ ನವ ವಧುವರರಿಗೆ ಜೊತೆಯಾಗಿದ್ದು, ನಾಗಾರ್ಜುನ. ಮಗನ ಎರಡನೇ ಮದುವೆ ಬಗ್ಗೆ ಕೂಡ ನಾಗಾರ್ಜುನರಿಗೆ ಸಂಭ್ರಮ ಇದೆ. ತಮ್ಮ ಮಗನಿಗೆ ಎರಡನೇ ಬಾರಿ ಪ್ರೀತಿ, ಸಂತೋಷ ಸಿಕ್ಕಿದೆ ಎಂದು ಸಹ ಇವರು ಹೇಳಿದ್ದರು. ಇನ್ನು ಕೆಲ ವರ್ಷಗಳ ಹಿಂದೆ ನಾಗಾರ್ಜುನ ಕಾರ್ಯಕ್ರಮವೊಂದರಲ್ಲಿ ಶೋಭಿತಾರನ್ನು ಹಾಟ್ ಎಂದು ಹೇಳಿದ್ದರು. ಸದ್ಯ ಆ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸಮಂತಾ ಬಚಾವಾದರು ಎಂದು ಹೇಳಿಕೊಳ್ಳುತ್ತಿದ್ದಾರೆ.