ವಿಚ್ಛೇದನದ ನಂತರ ವ್ಯಕ್ತಿಯೊಬ್ಬರು ಮಾಜಿ ಪತ್ನಿಯ ಪ್ರತಿಕೃತಿಯೊಂದಿಗೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ. ಹರ್ಯಾಣದಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿವಾಹ ವಾರ್ಷಿಕೋತ್ಸವ, ಹುಟ್ಟುಹಬ್ಬ, ಸೀಮಂತ, ನಿಶ್ಚಿತಾರ್ಥ ಮುಂತಾದ ಕಾರಣಕ್ಕೆ ಜನ ಪಾರ್ಟಿ ಕೊಡುವುದು, ಪಾರ್ಟಿ ಮಾಡುವುದನ್ನು ನೋಡಿದ್ದೀರಿ. ಆದರೆ ಇಲ್ಲೊಬ್ಬರು ವಿಹಾಹ ವಿಚ್ಛೇದನದ ಕಾರಣಕ್ಕೆ ಪಾರ್ಟಿ ನೀಡಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇತ್ತೀಚೆಗೆ ವಿಚ್ಛೇದನಗಳು ಸಾಮಾನ್ಯ ಎನಿಸಿವೆ. ಸಂಸಾರದ ಸರಿಗಮದ ತಾಳ ತಪ್ಪಲು ಆರಂಭಿಸುತ್ತಿದ್ದಂತೆ ಅನೇಕರು ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದುಕೊಂಡು ಹೊಸ ದಾರಿ ಹಿಡಿಯುತ್ತಿದ್ದಾರೆ. ಮೊದಲಿನಂತೆ ನಂಗೆ ವಿಚ್ಛೇದನ ಆಯ್ತು ಅಂತ ಅಳುವವರ ಸಂಖ್ಯೆ ಈಗ ಬಹಳ ಕಡಿಮೆ ದಿನಾ ಕಿತ್ತಾಡುತ್ತಾ ಜೀವನ ಪೂರ್ತಿ ವಿರಸದಲ್ಲೇ ಕಳೆಯುವ ಬದಲು ಪರಸ್ಪರ ಒಪ್ಪಿಗೆಯಿಂದ ವಿಚ್ಚೇದನ ಪಡೆದು ಬೇರೆ ಬದುಕನ್ನು ಕಂಡು ಕೊಳ್ಳುವುದು ಕವಲುದಾರಿಯಲ್ಲಿರುವ ದಂಪತಿಗಳಿಗೆ ನಿಜಕ್ಕೂ ನೆಮ್ಮದಿ ಎನಿಸುತ್ತದೆ. ಇದೇ ಕಾರಣಕ್ಕೆ ಇಂದು ವಿಚ್ಛೇದನಗಳ ಸಂಖ್ಯೆ ಹೆಚ್ಚಾಗಿದೆ. ವಿಚ್ಛೇದನ ಪಡೆದ ಕೆಲವರು ಖುಷಿಯಿಂದ ಸಂಭ್ರಮಿಸುತ್ತಿರುವ ಘಟನೆಗಳು ಆಗಾಗ ನಡೆಯುತ್ತಿರುತ್ತವೆ.
ಅದೇ ರೀತಿ ಇಲ್ಲೊಬ್ಬ ವಿಚ್ಚೇದಿತ ವ್ಯಕ್ತಿ ಡಿವೋರ್ಸ್ ನಂತರ ತನ್ನ ಮಾಜಿ ಪತ್ನಿಯ ಪ್ರತಿಕೃತಿ ಜೊತೆ ಫೋಟೋಗಳಿಗೆ ಫೋಸ್ ನೀಡಿ ಸಂಭ್ರಮಿಸಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. ವೈರಲ್ ಆದ ವೀಡಿಯೋದಲ್ಲಿ ಕಾಣಿಸುವಂತೆ ಹಿಂದಿ ಸಿನಿಮಾದ ವಿರಹ ಗೀತೆಯನ್ನು ಈ ವೀಡಿಯೋಗೆ ಸಂಯೋಜನೆ ಮಾಡಲಾಗಿದೆ. 30/6 2020ರಲ್ಲಿ ಈತನ ವಿವಾಹವಾಗಿದ್ದು, 2024ರ ಆಗಸ್ಟ್ 8ರಂದು ವಿಚ್ಛೇದನವಾಗಿದೆ. ಈ ವಿಚ್ಚೇದನ ಪಾರ್ಟಿಯಲ್ಲಿ ಆತ ಡಿವೋರ್ಸ್ ಪಾರ್ಟಿ ಎಂದು ಬ್ಯಾನರ್ ಹಾಕಿದ್ದು, ಅದರಲ್ಲಿ ಮದುವೆಯ ಹಾಗೂ ವಿಚ್ಚೇದನದ ದಿನಾಂಕವಿದೆ. ವೀಡಿಯೋದಲ್ಲಿ ಆತ ಕತ್ತಿಗೆ ಹೂವಿನ ಮಾಲೆಯನ್ನು ಹಾಕಿಕೊಂಡು ಪತ್ನಿಯ ಪ್ರತಿಕೃತಿಯ ಹೆಗಲಿಗೆ ಕೈ ಹಾಕಿ ಫೋಟೋಗಳಿಗೆ ಫೋಸ್ ನೀಡುತ್ತಿರುವ ದೃಶ್ಯವಿದೆ. ಅದರ ಮುಂದೆ ಕುರ್ಚಿ ಹಾಗೂ ಹೂವಿನಿಂದ ಪಕಳೆಗಳಿಂದ ಅಲಂಕೃತವಾದ ಟೇಬಲ್‌ಗಳು ಇದ್ದು, ಎರಡು 10ಕ್ಕೂ ಹೆಚ್ಚು ಕೇಕ್‌ಗಳನ್ನು ಟೇಬಲ್ ಮೇಲೆ ಇಡಲಾಗಿದೆ.
ಹರ್ಯಾಣದಲ್ಲಿ ಈ ಘಟನೆ ನಡೆದಿದೆ. ನಾಲ್ಕು ವರ್ಷಗಳ ಹಿಂದೆ ಈತನ ಮದ್ವೆ ನಡೆದಿದ್ದು, ಈ ವರ್ಷ ವಿಚ್ಚೇದನವಾಗಿದೆ. ವರದಿಯ ಪ್ರಕಾರ ಹರ್ಯಾಣ ಮೂಲದ ಮಂಜಿತ್ ಅವರು ಈ ಡಿವೋರ್ಸ್ ಪಾರ್ಟಿ ಆಯೋಜಿಸಿದ್ದಾರೆ. ಹರಿಯಾಣ ಮೂಲದ ಇವರು 2020ರಲ್ಲಿ ಕೋಮಲ್ ಎಂಬುವವರನ್ನು ಮದುವೆಯಾಗಿದ್ದರು. ಕೆಲವರು ಇವರ ಡಿವೋರ್ಸ್ ಪಾರ್ಟಿ ವೀಡಿಯೋಗೆ ಬೇಸರ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಸಂಭ್ರಮಿಸಿದರೆ ಜೀವನದ ಪ್ರತಿಕ್ಷಣವನ್ನು ಅನುಭವಿಸಬೇಕು ಎಂದು ಹೇಳುವುದಕ್ಕೆ ಇದೊಂದು ಉತ್ತಮ ಉದಾಹರಣೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.