Dec 8, 2020, 1:23 PM IST
ಬೆಂಗಳೂರು (ಡಿ. 08): ಭಾರತ್ ಬಂದ್‌ಗೆ ರಾಜ್ಯದಲ್ಲಿಯೂ ಬೆಂಬಲ ವ್ಯಕ್ತವಾಗಿದೆ. ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಉಪಾಹಾರ ಸೇವಿಸುವುದರ ಮೂಲಕ ವಿಭಿನ್ನ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆ ಬಗ್ಗೆ ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 'ಕೃಷಿ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿದ್ದು ಸರಿಯಲ್ಲ. ಅದಾನಿ, ಅಂಬಾನಿ ಮನೆಯಲ್ಲಿ ತಯಾರಾದ ಬಿಲ್ ತಂದು ಪಾರ್ಲಿಮೆಂಟ್ ಲಿ ಪಾಸ್ ಮಾಡೋದು ಸರಿಯಲ್ಲ. ರೈತರ ಜೊತೆ ಮುಂಚಿತವಾಗಿ ಚರ್ಚೆ ನಡೆಸಿಲ್ಲ? ಮಾರುಕಟ್ಟೆಯಲ್ಲಿ ಬದಲಾವಣೆ ಖಂಡಿತಾ ಬೇಕು. ಅದರೆ ನಿಮಗೆ ಬೇಕಾದ ಹಾಗೆ, ನಿಮ್ಮ ಆಪ್ತರಿಗೆ ಬೇಕಾದ ಹಾಗೆ ಕಾನೂನು ತಂದರೆ ನಾವದನ್ನು ಒಪ್ಪುವುದಿಲ್ಲ' ಎಂದಿದ್ದಾರೆ.