ರಿಪ್ಪನ್ ಪೇಟೆಯ ಸೂಡೂರು ಸೇತುವೆ ಬಳಿ ಘಟನೆ ನಡೆದಿದೆ. ರಿಪ್ಪನ್ ಪೇಟೆಯಿಂದ ಶಿವಮೊಗ್ಗ ಕಡೆಗೆ ಹೊರಟಿದ್ದ ಮಾರುತಿ ಆಲ್ಟೋ ಕಾರು. ಶಿವಮೊಗ್ಗದಿಂದ ರಿಪ್ಪನ್ ಪೇಟೆ ಕಡೆ ಬೈಕ್ ಸವಾರರು ಹೊರಟಿದ್ದರು. ಒಂದೇ ಬೈಕ್‌ನಲ್ಲಿ ಮೂವರು ಯುವಕರು ತೆರಳುತ್ತಿದ್ದರು.
ಶಿವಮೊಗ್ಗ(ಡಿ.11): ಕಾರು, ಬೈಕ್ ನಡುವೆ ಡಿಕ್ಕಿ ಸಂಭಬಿಸಿದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯಲ್ಲಿ ಇಂದು(ಬುಧವಾರ) ನಡೆದಿದೆ.
ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಯುವಕರ ಪೈಕಿ ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೊಬ್ಬನಿಗೆ ಗಂಭೀರ ಗಾಯವಾಗಿದ್ದು ಮತ್ತೋರ್ವ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕೊಡಗಿನಲ್ಲಿ KSRTC ಬಸ್ ಭೀಕರ ಅಪಘಾತ: 17 ಮಂದಿಗೆ ಗಾಯ
ರಿಪ್ಪನ್ ಪೇಟೆಯ ಸೂಡೂರು ಸೇತುವೆ ಬಳಿ ಘಟನೆ ನಡೆದಿದೆ. ರಿಪ್ಪನ್ ಪೇಟೆಯಿಂದ ಶಿವಮೊಗ್ಗ ಕಡೆಗೆ ಹೊರಟಿದ್ದ ಮಾರುತಿ ಆಲ್ಟೋ ಕಾರು. ಶಿವಮೊಗ್ಗದಿಂದ ರಿಪ್ಪನ್ ಪೇಟೆ ಕಡೆ ಬೈಕ್ ಸವಾರರು ಹೊರಟಿದ್ದರು. ಒಂದೇ ಬೈಕ್‌ನಲ್ಲಿ ಮೂವರು ಯುವಕರು ತೆರಳುತ್ತಿದ್ದರು. ರಿಪ್ಪನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.