BMTC: ETM ಮಷಿನ್ ಹೋಯ್ತು..ಪೇಪರ್ ಟಿಕೆಟ್ ಬಂತು, ಸಾರ್ವಜನಿಕರಿಂದ ಟೀಕೆ

Jan 30, 2022, 10:18 AM IST

ಬೆಂಗಳೂರು (ಜ. 30): ಬಿಎಂಟಿಸಿಯಲ್ಲಿ (BMTC) ಟಿಕೆಟ್ ನೀಡುವ, ಟ್ರೈಮ್ಯಾಕ್ಸ್ ಕಂಪನಿ ಕೊಟ್ಟಿರುವ ಇಟಿಎಂ ಮಷಿನ್‌ಗಳು ಹಾಳಾಗಿದೆ. ಬಿಎಂಟಿಸಿಗೆ ಬರೋಬ್ಬರಿ 10,498 ಇಟಿಎಂ ನೀಡಲಾಗಿತ್ತು. ಟ್ರೈಮ್ಯಾಕ್ಸ್ ಕಂಪನಿಗೆ ತಿಂಗಳಿಗೆ 80-90 ಸಾವಿರ ಬಾಡಿಗೆ ನೀಡಲಾಗುತ್ತಿದೆ. ಇದೀಗ ಹಣ ಪಾವತಿಸಿಲ್ಲ ಎಂದು ಇಟಿಎಂ ಮಷಿನ್ ರಿಪೇರಿಗೆ ಕಂಪನಿಯವರು ಬರುತ್ತಿಲ್ಲ. ಹಾಗಾಗಿ ಬಿಬಿಎಂಪಿ ಟಿಕೆಟ್ ನೀಡಲು ಮುಂದಾಗಿದೆ. 

Covid 19: ಜಿಮ್‌ಗಳಲ್ಲಿ ಮುಂದುವರೆದ 50:50 ನಿಯಮ, ಸರ್ಕಾರದ ವಿರುದ್ಧ ಮಾಲಿಕರ ಅಸಮಾಧಾನ

ಕೊರೋನಾ ಮಹಾಮಾರಿ ಸೋಂಕು ಕಾಡ್ಗಿಚ್ಚಿನಂತೆ ಹರಡುತ್ತಿರುವ ಈ ಸಂದರ್ಭದಲ್ಲಿ ಬಿಎಂಟಿಸಿಯು ನಿರ್ವಾಹಕರಿಂದ ಇಟಿಎಂ (ಎಲೆಕ್ಟ್ರಾನಿಕ್‌ ಟಿಕೆಟ್‌ ಮಷನ್‌) ಟಿಕೆಟ್‌ ಯಂತ್ರಗಳನ್ನು ಹಿಂಪಡೆದು ಹಳೇ ಮಾದರಿಯ ಕಾಗದದ ಟಿಕೆಟ್‌ಗಳನ್ನು ನೀಡಿರುವುದು ಸಾರ್ವಜನಿಕರಿಂದ ಟೀಕೆಗೆ ಗುರಿಯಾಗಿದೆ.