ಡಿವೋರ್ಸ್ ನಂತರ ಮೊದಲ ಬಾರಿ ಪುತ್ರನ ಜೊತೆ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯ

By Anusha Kb  |  First Published Sep 22, 2024, 10:19 PM IST

ವಿಚ್ಛೇದನದ ನಂತರ ಹಾರ್ದಿಕ್ ಪಾಂಡ್ಯಾ ಮೊದಲ ಬಾರಿಗೆ ಪುತ್ರ ಆಗಸ್ತ್ಯ ಜೊತೆ ಕಾಣಿಸಿಕೊಂಡಿದ್ದಾರೆ. ಈ ಅಪ್ಪ ಮಗನ ಫೋಟೋ ಮತ್ತು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.


ಪತ್ನಿ ನತಾಶಾ ಸ್ಟಾಂಕೋವಿಕ್‌ ಜೊತೆ ವಿಚ್ಛೇದನದ ನಂತ ಕ್ರಿಕೆಟರ್ ಹಾರ್ದಿಕ್ ಪಾಂಡ್ಯಾ ಇದೇ ಮೊದಲ ಬಾರಿಗೆ ಪುತ್ರ ಆಗಸ್ತ್ಯ ಜೊತೆ ಕಾಣಿಸಿಕೊಂಡಿದ್ದು, ಈ ಅಪ್ಪ ಮಗನ ಫೋಟೋ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ನತಾಶಾರಿಂದ ದೂರವಾದ ನಂತರ ಹಾರ್ದಿಕ್‌ ಪಾಂಡ್ಯ ಇದೇ ಮೊದಲ ಬಾರಿಗೆ ಮಗನೊಂದಿಗೆ ಸಮಯ ಕಳೆಯುತ್ತಿದ್ದಾರೆ. ಭಾರತದ ಆಲ್ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ ಇನ್ಸ್ಟಾಗ್ರಾಮ್‌ನಲ್ಲಿ ವೀಡಿಯೋವೊಂದನ್ನು ಶೇರ್ ಮಾಡಿದ್ದು, ಈ ವೀಡಿಯೋದಲ್ಲಿ ಪಾಂಡ್ಯಾ ತನ್ನ ನಾಲ್ಕು ವರ್ಷ ಮಗ ತನ್ನ ಸೋದರನ ಪುತ್ರನೊಂದಿಗೆ ಮುಂಬೈನಲ್ಲಿ ನಗುತ್ತಾ ಖುಷಿಯ ಸಮಯವನ್ನು ಕಳೆಯುತ್ತಿರುವುದನ್ನು ಕಾಣಬಹುದಾಗಿದೆ. ಪುತ್ರ ಆಗಸ್ತ್ಯ ಖುಷಿ ಖುಷಿಯಿಂದ ಅಪ್ಪನ ಕಾರನ್ನು ಏರುವುದನ್ನು ಕಾಣಬಹುದಾಗಿದೆ. 

ಇದು ನತಾಶ ಜೊತೆಗಿನ ವಿಚ್ಛೇದನದ ನಂತರ ಹಾರ್ದಿಕ್ ಮಗನೊಂದಿಗೆ ಕಳೆಯುತ್ತಿರುವ ಮೊದಲ ಖುಷಿಯ ಕ್ಷಣವಾಗಿದೆ. ಇದಕ್ಕೂ ಮೊದಲು ನತಾಶಾ ತನ್ನ ತಾಯ್ನಾಡು ಸರ್ಬಿಯಾಗೆ ಮಗನೊಂದಿಗೆ ತೆರಳಿದ್ದರು. ಕೆಲವಾರಗಳ ನಂತರ ಮರಳಿ ಬಂದ ಅವರು ನಂತರ ಪುತ್ರನನ್ನು ಹಾರ್ದಿಕ್ ಮನೆಗೆ ಬಿಟ್ಟು ಬಂದಿದ್ದರು ಹಾರ್ದಿಕ್ ಸೋದರ ಕೃನಾಲ್ ಪಾಂಡ್ಯ ಪತ್ನಿ ಪಂಕುರಿ ಶರ್ಮಾ ತನ್ನ ಪುತ್ರ ಹಾಗೂ ಆಗಸ್ತ್ಯನ ಜೊತೆ ಸಮಯ ಕಳೆಯುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. 

Tap to resize

Latest Videos

undefined

ಡಿವೋರ್ಸ್‌ ನಂತರ ಮಗನ ಹಾರ್ದಿಕ್ ಪಾಂಡ್ಯ ಮನೆಗೆ ಬಿಟ್ಟು ಬಂದ ನತಾಶ

ಈಗ ಪಾಂಡ್ಯ ಅವರು ಅಕ್ಟೋಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಆರಂಭವಾಗುವ T20 ಸರಣಿಗೆ ತಯಾರಿ ನಡೆಸುವ ಮೊದಲು  ಕುಟುಂಬ ಹಾಗೂ ಮಗನೊಂದಿಗೆ ಸ್ವಲ್ಪ ಸಮಯ ಕಳೆದಿದ್ದಾರೆ. 2020 ರಲ್ಲಿ ವಿವಾಹವಾಗಿದ್ದ ನತಾಶ ಹಾಗೂ ಹಾರ್ದಿಕ್ ಪಾಂಡ್ಯ ಕಳೆದ ಜುಲೈನಲ್ಲಿ ವಿಚ್ಚೇದನ ಪಡೆದುಕೊಂಡಿದ್ದಾರೆ. ಹಾರ್ದಿಕ್ ಮತ್ತು ನತಾಶಾ ಇಬ್ಬರೂ ತಮ್ಮ ವಿಚ್ಛೇದನದ ನಿರ್ಧಾರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಆಗಸ್ಟ್‌ನಲ್ಲಿ ನತಾಶ ಅವರು ಹಾರ್ದಿಕ್ ಜೊತೆಗಿನ ವಿಚ್ಚೇದನಕ್ಕೆ ಕಾರಣ ತಿಳಿಸಿದ್ದರು. 

ಈ ಕಾರಣಕ್ಕೆ ಹಾರ್ದಿಕ್ ಪಾಂಡ್ಯ, ನತಾಶಾ ಬೇರೆಯಾದ್ರಂತೆ, ಬಯಲಾಯ್ತು ಸಂಸಾರದ ಗುಟ್ಟು!

 

 

ಆಗಸ್ಟ್‌ನಲ್ಲಿ, ನತಾಶ ಅವರು ಹಾರ್ದಿಕ್ ಅವರದ್ದು, ತನ್ನ(ಆತನ) ಬಗ್ಗೆ ಮಾತ್ರ ಯೋಚನೆ ಮಾಡುವ ತನ್ನದೇ ನಡೆಯಬೇಕು ಎಂದು ಬಯಸುವ ವ್ಯಕ್ತಿತ್ವ ಆತನದ್ದಾಗಿದ್ದು, ಆತನ ವ್ಯಕ್ತಿತ್ವಕ್ಕೆ ಹೊಂದಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಇಬ್ಬರ ಹಿತದೃಷ್ಟಿಯಿಂದ ದೂರಾಗುವುದೇ ಉತ್ತಮ ಎಂದು ಭಾವಿಸಿ ವಿಚ್ಚೇದನ ಪಡೆದಿದ್ದಾರೆ ಎಂದು ವರದಿ ಆಗಿತ್ತು. ಇದರ ಹೊರತಾಗಿ ಕೆಲ ವರದಿಗಳ ಪ್ರಕಾರ ಹಾರ್ದಿಕ್ ಗಾಯಕ ಜಾಸ್ಮಿನ್ ವಾಲಿಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಇದೆ. ಇತ್ತ ಮಗ ಆಗಸ್ತ್ಯನಿಗೆ ನತಾಶಾ ಹಾಗೂ ಹಾರ್ದಿಕ್ ಇಬ್ಬರು ಸಹ ಪೋಷಕರಾಗಿದ್ದಾರೆ. 

Reunited 🥹🫶🤍 pic.twitter.com/szZ2PpBCcl

— Hardiklipsa (@93Lipsa)

 

click me!