ಪೊಲೀಸ್ ನನ್ನ ಕಾರು ಸೀಝ್ ಮಾಡಿಲ್ಲ; ಬಿಎಂ ಫಾರೂಖ್ ಸ್ಪಷ್ಟನೆ!

Aug 23, 2021, 10:27 PM IST

ಬೆಂಗಳೂರು(ಆ.23): ಆರ್‌ಟಿಒ ಅಧಿಕಾರಿಗಳು ನನ್ನ ಕಾರು ಸೀಝ್ ಮಾಡಿದ್ದಾರೆ ಅನ್ನೋ  ಸುದ್ದಿ ಸುಳ್ಳು ಎಂದು ಎಂಎಲ್‌ಸಿ ಬಿ.ಎಂ ಫಾರೂಖ್ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಸ್ಪಷ್ಟನೆ ನೀಡಿದ್ದಾರೆ. RTO ಅಧಿಕಾರಿಗಳು ಕಾರಿನ ದಾಖಲೆ ಪರಿಶೀಲಿಸಿದರು. ನನ್ನ ಮಗಳು ಕಾರು ಚಲಾಯಿಸುತ್ತಿದ್ದಳು. ಆದರೆ ತಪಾಸಣೆ ಹೆಸರಲ್ಲಿ  RTO ಅಧಿಕಾರಿಗಳು ಕಿರುಕುಳ ನೀಡಿದ್ದಾರೆ. ಎಲ್ಲಾ ದಾಖಲೆ ಇದ್ದರೂ ಅಧಿಕಾರಿಗಳು ತೊಂದರೆ ನೀಡಿದ್ದಾರೆ ಎಂದಿದ್ದಾರೆ,