ಕೊರೊನಾ ಭಯ ಹುಟ್ಟಿಸಿ ಪೋಷಕರಿಂದ ಹಣ ವಸೂಲಿಗಿಳಿದಿವೆ ಖಾಸಗಿ ಶಾಲೆಗಳು

Jun 6, 2020, 1:39 PM IST

ಬೆಂಗಳೂರು (ಜೂ. 06): ಪೋಷಕರಿಂದ ಹಣ ಪೀಕಲು ಖಾಸಗಿ ಶಾಲೆಗಳು ಮತ್ತೊಂದು ಪ್ಲಾನ್ ಮಾಡಿವೆ. ಸದ್ಯ ಕೊರೊನಾ ಭೀತಿ ಇರುವುದರಿಂದ ಪೋಷಕರು ಮಕ್ಕಳನ್ನು ಕಳುಹಿಸಲು ಭಯಪಡುತ್ತಾರೆ. ಅವರಲ್ಲಿ ಇನ್ನಷ್ಟು ಭಯ ಹುಟ್ಟಿಸಿ ಹಣ ವಸೂಲಿಗಿಳಿದಿವೆ ಖಾಸಗಿ ಶಾಲೆಗಳು. ಮಕ್ಕಳಿಗೆ ಮಾಸ್ಕ್ ಕೊಡುವುದಲ್ಲಿ ಹಣ ಪೀಕಲು ಪ್ಲಾನ್ ಮಾಡಿವೆ. 

ಕೊರೋನಾ ನಡುವೆ ಶಾಲೆ ಪುನಾರಂಭಿಸಿದ ದೇಶಗಳ ಪರಿಸ್ಥಿತಿ ಇದು!

ಶಾಲೆಯ ಹೆಸರು, ಲೋಗೋ ಇರುವ ಮಾಸ್ಕ್ ತಯಾರಿಸಲಾಗಿದ್ದು ಒಂದು ಮಾಸ್ಕ್‌ಗೆ 400 ರೂ ನಿಗದಿಪಡಿಸಲಾಗಿದೆ. ಕಡ್ಡಾಯವಾಗಿ ಮಕ್ಕಳು ಇಲ್ಲಿಯೇ ಖರೀದಿಸಬೇಕೆಂದು ಕಡ್ಡಾಯಗೊಳಿಸಲಾಗಿದೆ. ಶಾಲೆ ಬವಿರುದ್ಧ ಬಹಿರಂಗವಾಗಿ ಮಾತನಾಡಲು ಪೊಷಕರು ಹೆದರುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!