ಕೋವಿಡ್ ವ್ಯಾಕ್ಸಿನ್ ಡ್ರೈ ರನ್‌ಗೆ ಬಿಬಿಎಂಪಿ ಸಜ್ಜು, ನಾಳೆಯಿಂದ ಶುರು ವಿತರಣೆ

Jan 1, 2021, 3:27 PM IST

ಬೆಂಗಳೂರು (ಜ. 01): ಈ ವರ್ಷದ ಆರಂಭಕ್ಕೆ ಕೊರೊನಾ ಲಸಿಕೆ ಬರಬಹುದೆಂಬ ನಿರೀಕ್ಷೆ ನಿಜವಾಗಿದೆ. ವರ್ಷದ ಆರಂಭಕ್ಕೆ ಲಸಿಕೆ ಬಂದಿದ್ದು,, ಭರವಸೆ ಮೂಡಿಸಿದೆ. ಕೊರೊನಾ ವ್ಯಾಕ್ಸಿನ್ ಡ್ರೈ ರನ್ (ಅಣುಕು ವಿತರಣೆ) ಗೆ ಬಿಬಿಎಂಪಿ ಸಿದ್ಧವಾಗಿದೆ. ನಾಳೆಯಿಂದ ತಾಲೀಮು ಆರಂಭವಾಗಲಿದೆ.ಕಾಮಾಕ್ಷಿಪಾಳ್ಯ, ವಿದ್ಯಾಪೀಠದಲ್ಲಿ ಮೊದಲ ಡ್ರೈ ರನ್ ನಡೆಯಲಿದೆ.  ಕೊರೊನಾ ವಾರಿಯರ್ಸ್, ಆರೋಗ್ಯ ಕಾರ್ಯಕರ್ತರಿಗೆ ಆದ್ಯತೆ ಮೇರೆಗೆ ಲಸಿಕೆ ವಿತರಣೆ ಮಾಡಲಾಗುವುದು. ಯಾವ ರೀತಿ ಹಂಚಿಕೆ ಮಾಡಬೇಕು ಎಂದು ನಿರ್ಧರಿಸಲಾಗುವುದು. 

ಹೊಸ ವರ್ಷದ ಆರಂಭದಲ್ಲಿ ಗುಡ್ ನ್ಯೂಸ್, ನಾಳೆಯಿಂದ ವ್ಯಾಕ್ಸಿನ್ ಡ್ರೈ ರನ್..!