BBMP Elections: ಏಪ್ರಿಲ್‌ನಲ್ಲಿ ಚುನಾವಣೆ.? ಇಂದಿನಿಂದ 3 ದಿನ ಸಿಎಂ ಸರಣಿ ಸಭೆ

Jan 25, 2022, 10:20 AM IST

ಬೆಂಗಳೂರು (ಜ. 25): ಮುಂಬರುವ ಬಿಬಿಎಂಪಿ ಚುನಾವಣೆ (BBMP Elections) ದೃಷ್ಟಿಯಿಂದ ಇಂದಿನಿಂದ ಮೂರು ದಿನಗಳ ಕಾಲ ಬಿಜೆಪಿಯ ಪೂರ್ವಸಿದ್ಧತಾ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ನಗರದ ಸಚಿವರು, ಶಾಸಕರು ಹಾಗೂ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

Cabinet Reshuffle: ಸಂಪುಟ ಪುನಾರಚನೆ ಬಗ್ಗೆ ಮಾಹಿತಿ ಇಲ್ಲ, ಗೋವಾ ಚುನಾವಣೆಯಲ್ಲಿ ಬ್ಯುಸಿ: ಸಿ ಟಿ ರವಿ

ಕಳೆದೊಂದು ವರ್ಷದಿಂದ ಬಿಬಿಎಂಪಿ (BBMP) ಚುನಾವಣೆ ನೆನೆಗುದಿಗೆ ಬಿದ್ದಿರುವುದಕ್ಕೆ ಪಕ್ಷದಲ್ಲಿ ತೀವ್ರ ಅಸಮಾಧಾನ ಕಾಣಿಸಿಕೊಂಡಿದೆ. ಈ ಬಗ್ಗೆ ಪಕ್ಷದ ಹಿರಿಯ ನಾಯಕರಿಗೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ದೂರನ್ನೂ ನೀಡಿದ್ದರು. ಇದು ಹೀಗೆಯೇ ಮುಂದುವರೆದಲ್ಲಿ ಮುಂಬರುವ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವನ್ನು ಹೊಂದಿದ್ದ ಹಿರಿಯ ನಾಯಕರು ಇನ್ನು ಚುನಾವಣೆ ವಿಳಂಬ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯಕ್ಕೆ ಬಂದರು.