IPL 2024 ಆರ್‌ಸಿಬಿ ಬೆಂಬಲಕ್ಕೆ 'ಕಾಂತಾರಾ ಬಾಸ್' ಜೋಡಿ, ಚಿನ್ನಸ್ವಾಮಿಯಲ್ಲಿ ಸ್ಟಾರ್ಸ್‌ ಕಲವರ!

First Published | May 18, 2024, 9:23 PM IST

ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಅತ್ಯಂತ ಮಹತ್ವ ಪಂದ್ಯಕ್ಕೆ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದಾರೆ. ಇತ್ತ ಹಲವು ಸೆಲೆಬ್ರೆಟಿಗಳು ಆರ್‌ಸಿಬಿ ಬೆಂಬಲ ನೀಡಲು ಮೈದಾನದಲ್ಲಿ ಹಾಜರಾಗಿದ್ದಾರೆ. ಆರ್‌ಸಿಬಿ ಮಾಜಿ ಕ್ರಿಕೆಟಿಗ , ಬಾಸ್ ಕ್ರಿಸ್ ಗೇಲ್ ಹಾಗೂ ರಿಷಬ್ ಶೆಟ್ಟಿ ಜೊತೆಯಾಗಿ ಬೆಂಬಲ ಸೂಚಿಸಿದ್ದಾರೆ.
 

ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಲೀಗ್ ಪಂದ್ಯ ಫೈನಲ್ ಸ್ವರೂಪ ಪಡೆದುಕೊಂಡಿದೆ. ಪ್ಲೇ ಆಫ್ ಪ್ರವೇಶಕ್ಕೆ ಈ ಪಂದ್ಯ ಅತ್ಯಂತ ಪ್ರಮುಖವಾಗಿರುವ ಕಾರಣ ಕ್ರೀಡಾಂಗಣ ಅಭಿಮಾನಿಗಳು, ಸೆಲೆಬ್ರೆಟಿಗಳು, ಗಣ್ಯರಿಂದ ಭರ್ತಿಯಾಗಿದೆ.

ಆರ್‌ಸಿಬಿ ತಂಡಕ್ಕೆ ಬೆಂಬಲ ನೀಡಲು ಮಾಜಿ ಕ್ರಿಕೆಟಿಗ, ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಹಾಜರಾಗಿದ್ದಾರೆ. ವಿಶೇಷ ಅಂದರೆ ಇತ್ತ ಕಾಂತಾರಾ ನಟ ರಿಷಬ್ ಶೆಟ್ಟಿ ಹಾಗೂ ಗೇಲ್ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

Tap to resize

ರಿಷಭ್ ಶೆಟ್ಟಿ ಹಾಗೂ ಗ್ರೇಸ್ ಗೇಲ್ ಜೊತೆಯಾಗಿ ಆರ್‌ಸಿಬಿ ತಂಡಕ್ಕೆ ಚಿಯರ್ ಅಪ್ ಮಾಡುತ್ತಿದ್ದಾರೆ.  ಇಬ್ಬರು ಜೊತೆಯಾಗಿ ಕ್ಯಾಮೆರಾಗೆ ಫೋಸ್ ನೀಡಿದ್ದಾರೆ.
 

ಸ್ಯಾಂಡಲ್‌ವುಡ್ ನಟ ಶಿವರಾಜ್ ಕುಮಾರ್ ಕೂಡ ಆರ್‌ಸಿಬಿಗೆ ಬೆಂಬಲ ಸೂಚಿಸಿದ್ದಾರೆ. ಆರ್‌ಸಿಬಿ ಜರ್ಸಿ ಹಾಕಿ ಇಂದು ಆರ್‌ಸಿಬಿ ಪಂದ್ಯ ಗೆದ್ದೇ ಗೆಲ್ಲುತ್ತೆ ಎಂದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಪಂದ್ಯಕ್ಕೆ ಹಾಜರಾಗಿದ್ದಾರೆ. ಆರ್‌ಸಿಬಿ ಅಭಿಮಾನಿಯಾಗಿರು ಸಿದ್ದರಾಮಯ್ಯ, ಕ್ರಿಕೆಟ್ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದಾರೆ.

ಇತ್ತಿಚೆಗೆ ನಡೆದ ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬೆ ಟ್ರೋಫಿ ಕಿರೀಟ ತಂದುಕೊಟ್ಟ ಆರ್‌ಸಿಬಿ ಮಹಿಳಾ ತಂಡ ಕೂಡ ಕ್ರೀಡಾಂಗಣದಲ್ಲಿ ಹಾಜರಾಗಿದೆ.
 

ಪ್ಲೇ ಆಫ್ ಪ್ರವೇಶಿಸಲು ಆರ್‌ಸಿಬಿ ಪಂದ್ಯದಲ್ಲಿಉತ್ತಮ ರನ್‌ರೇಟ್ ಜೊತೆ ಚೆನ್ನೈ ತಂಡವನ್ನು ಮಣಿಸಬೇಕು. ಹೀಗಾಗರೆ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿ ಪ್ಲೇ ಆಫ್ ಸ್ಥಾನ ಖಚಿತವಾಗಲಿದೆ.

ಇಂದಿನ ಪಂದ್ಯಕ್ಕೆ ಮಳೆ ವಕ್ಕರಿಸಿದ್ದು, ಕೆಲ ಕಾಲ ಪಂದ್ಯ ಸ್ಥಗಿತಗೊಂಡಿತ್ತು. ಮಳೆ ಬಳಿಕ ಪಂದ್ಯ ಪುನರ್ ಆರಂಭಗೊಂಡಿದೆ. ಇದೀಗ ಅಭಿಮಾನಗಳ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. 

Latest Videos

click me!