Oct 17, 2022, 11:24 AM IST
ಮುರುಘಾ ಮಠದ ಪೂಜಾ ಕೈಂಕರ್ಯಕ್ಕೆ ಅಡ್ಡಿಯಾಗಬಾರದೆಂದು ಬಸವ ಪ್ರಭು ಸ್ವಾಮೀಜಿಯನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಈ ಕುರಿತು ಹೆಬ್ಬಾಳ ಮಹಾಂತರುದ್ರ ಸ್ವಾಮೀಜಿ ಮಾತನಾಡಿದ್ದು, ವಿರಕ್ತ ಮಠದ ಎಲ್ಲಾ ಶ್ರೀಗಳಲ್ಲಿ ಬಸವ ಪ್ರಭುಶ್ರೀಗೆ ಅದೃಷ್ಟವಿದೆ. ಅನ್ನದ ಋಣ, ಅಧಿಕಾರದ ಋಣ ಇರುವವರು ಅದನ್ನು ಅನುಭವಿಸಬೇಕು. ನನ್ನ ಋಣ ಮುಗಿತು ಹಾಗಾಗಿ ನಾನು ಮಠಕ್ಕೆ ವಾಪಸ್ ಬಂದೆ ಎಂದು ಅವರು ತಿಳಿಸಿದ್ದಾರೆ. ಮುರುಘಾ ಶರಣರು ಅಪರಾಧಿಯಲ್ಲ, ಅವರು ಆರೋಪಿ ಮಾತ್ರ. ಅವರು ನಿರಪರಾಧಿಯಾಗಿ ಹೊರಗೆ ಬರುವ ಸಾಧ್ಯತೆಯಿದೆ. ಈ ಬಗ್ಗೆ ನನಗೆ ಯಾವುದೇ ನಿರಾಸೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.