ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಪ್ರತಿಷ್ಠಿತ ENBA ಪ್ರಶಸ್ತಿ ಗರಿ

Apr 4, 2021, 10:33 AM IST

ಬೆಂಗಳೂರು (ಏ. 04): ನೇರ, ದಿಟ್ಟ, ನಿರಂತತರ ಸುದ್ದಿಗಳಿಂದ ವಿಶ್ವಾಸಾರ್ಹತೆ ಗೆದ್ದಿರುವ 'ಏಷ್ಯಾನೆಟ್ ಸುವರ್ಣ ನ್ಯೂಸ್' ರಾಷ್ಟ್ರಮಟ್ಟದ ಪ್ರತಿಷ್ಠಿತ 'ಎನ್ಬಾ 2020' ಅವಾರ್ಡ್‌ನ ಮೂರು ವಿಭಾಗಗಳಲ್ಲಿ ಪ್ರಶಸ್ತಿಗೆ ಭಾಜನವಾಗಿದೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ಇದು ಮೂರನೆ ಬಾರಿಯಾದರೆ, ಬಿಗ್‌ 3 ಗೆ ಇದು 3 ನೇ ಬಾರಿಯಾಗಿದೆ. ಈ ಪ್ರಶಸ್ತಿಯ ಮುಖ್ಯ ಉದ್ದೇಶ ನ್ಯೂಸ್ ಉದ್ಯಮದಲ್ಲಿ ಹೊಸ ಬದಲಾವಣೆಗೆ ಕಾರಣವಾಗುವ ಸುದ್ದಿವಾಹಿನಿಗಳು, ಸುದ್ದಿ ಸಂಸ್ಥೆಗಳನ್ನು ಗುರುತಿಸಿ ಗೌರವಿಸುವುದು. ಅದೇ ರೀತಿ ಸದಾ ಹೊಸತನದ ಹರಿಕಾರ ಎನಿಸಿಕೊಂಡಿರುವ ಸುವರ್ಣ ನ್ಯೂಸ್‌ಗೆ ಪ್ರಶಸ್ತಿ ಬಂದಿರುವುದು ಹೆಮ್ಮೆಯ ವಿಚಾರ!