Feb 5, 2022, 1:47 PM IST
ಬೆಂಗಳೂರು (ಫೆ. 05): ಸರ್ಕಾರಿ ಶಾಲೆ ಮಕ್ಕಳ ಆರೋಗ್ಯದ ಜೊತೆ ಶಿಕ್ಷಣ ಇಲಾಖೆ ಚೆಲ್ಲಾಟವಾಡುತ್ತಿದೆ. ಅಕ್ಷರ ದಾಸೋಹದ (Akshara Dasoha) ಹೆಸರಿನಲ್ಲಿ ಕಳಪೆ ಆಹಾರ ಧಾನ್ಯಗಳನ್ನು ಪೂರೈಸಲಾಗುತ್ತಿದೆ. ಕಸ ಕಡ್ಡಿ ನುಸಿ ಸೇರಿರುವ ಕಳಪೆ ಆಹಾರ ಧಾನ್ಯಗಳನ್ನು ಕೊಟ್ಟಿದೆ. ಇದನ್ನು ತಿಂದರೆ ಮಕ್ಕಳ ಆರೋಗ್ಯದ ಗತಿಯೇನು..? ಹಾವೇರಿ ಜಿಲ್ಲೆ ಬಂಕಾಪುರ ಸರ್ಕಾರಿ ಶಾಲೆಯಲ್ಲಿ ಇದು ಕಂಡು ಬಂದಿದೆ. ಎಲ್ಲಾ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಕಳಪೆ ಆಹಾರ ಧಾನ್ಯ ವಿತರಣೆಯಾಗಿರುವ ಶಂಕೆ ವ್ಯಕ್ತವಾಗಿದೆ. ಇದು ಅಕ್ಷರ ದಾಸೋಹವೋ, ಗುತ್ತಿಗೆದಾರರು, ಅಧಿಕಾರಿಗಳ ಸ್ವಾಹವೋ.? ಎಂಬ ಶಂಕೆ ವ್ಯಕ್ತವಾಗಿದೆ.
Chikkamagaluru: ಅಧಿಕಾರಿಗಳ ನಿರ್ಲಕ್ಷ್ಯದಿಂದ ಭಾಗ್ಯಲಕ್ಷ್ಮೀ ಯೋಜನೆಗೆ ಗ್ರಹಣ