ಬೆಂಗಳೂರಲ್ಲಿ ಕೊರೋನಾ ಹೆಚ್ಚಳಕ್ಕೆ ಮಾಲಿನ್ಯವೇ ಕಾರಣವಂತೆ.!

Jul 3, 2021, 4:55 PM IST

ಬೆಂಗಳೂರು (ಜು. 03): ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತಾ, ಪುಣೆ, ಅಹಮದಾಬಾದ್‌ ಸೇರಿದಂತೆ 16 ಪ್ರಮುಖ ನಗರಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಿರುವುದಕ್ಕೆ ಪಿಎಂ 2.5 ಸೂಕ್ಷ್ಮ ಕಣಗಳ ಹೊರಸೂಸುವಿಕೆ ಅಧಿಕ ಪ್ರಮಾಣದಲ್ಲಿರುವುದೇ ಕಾರಣವಂತೆ.  ವಾಹನಗಳಿಂದ ಉಂಟಾಗುವ ಹೊಗೆಯಿಂದಾಗಿ ಪಿಎಂ 2.5 ಸೂಕ್ಷ್ಮ ಕಣಗಳ ಸಂದ್ರತೆ ಈ ನಗರಗಳಲ್ಲಿ ಅಧಿಕವಾಗಿದೆ. ಈ ಕಣಗಳು ಶ್ವಾಸಕೋಶದೊಳಕ್ಕೆ ಸೇರಿ ಉರಿಊತಕ್ಕೆ ಕಾರಣವಾಗುತ್ತದೆ. ಇದರಿಂದ ರೋಗನಿರೋಧಕ ಶಕ್ತಿ ಕುಂದಿ ಉಸಿರಾಟ ತೊಂದರೆ ಉಂಟಾಗುವ ಅಪಾಯ ಇರುತ್ತದೆ ಎಂದು ಅಧ್ಯಯನ ತಿಳಿಸಿದೆ.