Jul 3, 2020, 5:49 PM IST
ಬೆಂಗಳೂರು (ಜು. 03): ಬಿಬಿಎಂಪಿ 15 ಸಿಬ್ಬಂದಿಗಳಿಗೆ ಕೊರೊನಾ ಮಹಾಮಾರಿ ವಕ್ಕರಿಸಿದೆ. ಚಾಲಕ, ಕ್ಲರ್ಕ್, ಆರೋಗ್ಯ ವೈದ್ಯಾಧಿಕಾರಿ, ಕಂದಾಯ ವಸೂಲಿಗಾರರು, ಎಂಜಿನೀಯರ್ಗಳಿಗೆ ಪಾಸಿಟಿವ್ ಬಂದಿದೆ. ಇದು ನಿಜಕ್ಕೂ ಆತಂಕವನ್ನು ಹುಟ್ಟು ಹಾಕಿದೆ.
ಸಿಎಂ ಬದಲಿ ಕಾರು ಚಾಲಕಿನಿಗೂ ವಕ್ಕರಿಸಿದ ಕೊರೋನಾ
ರಾಜ್ಯ ರಾಜಧಾನಿಯಲ್ಲಿ ದಿನೇ ದಿನಕ್ಕೆ ಕೊರೊನಾ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ನಿಯಂತ್ರಣಕ್ಕೆ ಸಿಗದೇ ಒಂದೇ ಸಮನೆ ಏರಿಕೆಯಾಗುತ್ತಿದೆ. ಈಗ ಬಿಬಿಎಂಪಿಗೆ ಶಾಕ್ ನೀಡಿದೆ. ಈ ಸಿಬ್ಬಂದಿಗಳಿಂದ ಇನ್ನಷ್ಟು ಮಂದಿಗೆ ಹರಡುವ ಭೀತಿ ಎದುರಾಗಿದೆ.