Jun 22, 2020, 11:36 AM IST
ಬೆಂಗಳೂರು(ಜೂ.22): ಕೊರೋನಾ ಅಬ್ಬರಕ್ಕೆ ಸಿಲಿಕಾನ್ ಸಿಟಿ ನಲುಗಿ ಹೋಗಿದೆ. ಕ್ವಾರಂಟೈನ್ ನಿಯಮ ಪಾಲಿಸದೇ ಹೋದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎಂದು ಕೊರೋನಾ ವಾರ್ ರೂಂ ಮುಖ್ಯಸ್ಥ ಮನೀಷ್ ಮೌದ್ಗಿಲ್ ಎಚ್ಚರಿಸಿದ್ದಾರೆ.
ಅನ್‌ಲಾಕ್ ಬಳಿಕ ಲಕ್ಷಕ್ಕೂ ಅಧಿಕ ಮಂದಿ ಮನೆಯಿಂದ ರಸ್ತೆಗಿಳಿದಿದ್ದಾರೆ. ಕೊರೋನಾ ತಡೆಯುವ ವಿಚಾರದಲ್ಲಿ ಜನರು ಸಾಮಾಜಿಕ ಜವಾಬ್ದಾರಿ ಮೆರೆಯಬೇಕಾಗಿದೆ. ಮಾಸ್ಕ್ ಹಾಗೂ ಸಾಮಾಜಿಕ ಅಂತರದಿಂದಷ್ಟೇ ಕೊರೋನಾವನ್ನು ತಡೆಗಟ್ಟಬಹುದು ಎಂದು ಮೌದ್ಗಿಲ್ ಹೇಳಿದ್ದಾರೆ.
ಮೈಸೂರು: ಪೇದೆಗೆ ಅಂಟಿದ ಕೊರೋನಾ, ಅಡಿಷನಲ್ SP ಸ್ನೇಹಾ ಸೇರಿ 22 ಮಂದಿ ಕ್ವಾರಂಟೈನ್
ಕಳೆದ ಒಂದೆರಡು ವಾರದಿಂದ ಬೆಂಗಳೂರಿನಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಕೊರೋನಾ ಸೋಂಕು ತಡೆಯುವುದಕ್ಕೆ ಜನರ ಸಹಕಾರ ಅತ್ಯಗತ್ಯವಾಗಿ ಬೇಕಾಗಿದೆ ಎಂದು ಮೌದ್ಗಿಲ್ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.