ರಾಖಿ ಕಟ್ಟಿದ ತಂಗಿಗೆ ರಾಕಿಭಾಯ್ ಕೊಟ್ಟ ಭರ್ಜರಿ ಗಿಫ್ಟ್ ಏನು?

Aug 13, 2022, 2:59 PM IST

ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಮತ್ತು ಸಹೋದರಿ ನಂದಿನಿ ರಾಖಿ ಹಬ್ಬವನ್ನು ಆಚರಿಸಿದ್ದಾರೆ. ಬೆಳ್ಳಂಬೆಳಗ್ಗೆ ನಂದಿನಿ ಪ್ರೀತಿಯ ಸಹೋದರ ಯಶ್‌ಗೆ ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ. ಅಂದಹಾಗೆ ರಾಕಿಂಗ್ ಸ್ಟಾರ್ ಸಹೋದರಿ ಪ್ರತಿ ವರ್ಷ ರಕ್ಷಬಂಧನ ಹಬ್ಬವನ್ನು ಆಚರಿಸುತ್ತಾರೆ. ಯಶ್‌ಗೆ ರಾಖಿ ಕಟ್ಟಿ ಸಂಭ್ರಮಿಸುತ್ತಾರೆ. ಈ ವರ್ಷ ಕೂಡ ಸಹೋದರನಿಗೆ ರಾಖಿ ಕಟ್ಟಿದ್ದಾರೆ. ಕೆಜಿಎಫ್ ಸ್ಟಾರ್ ಯಶ್‌ಗೆ ಸಹೋದರಿ ನಂದಿನಿ ರಾಖಿ ಕಟ್ಟುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರೀತಿಯ ಸಹೋದರ ಯಶ್‌ಗೆ ಆರತಿ ಬೆಳಗಿ ತಿಲಕ ಇಟ್ಟು ರಾಖಿ ಕಟ್ಟಿದ್ದಾರೆ. ರಾಕಿಂಗ್ ಸಹೋದರಿಯ ರಾಖಿ ಹಬ್ಬದ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಅಂದಹಾಗೆ ರಾಕಿ ಭಾಯ್ ಸಹೋದರಿಗೆ ಏನು ಗಿಫ್ಟ್ ಕೊಟ್ಟಿರಬಹುದು ಎನ್ನುವ ಚರ್ಚೆ ನಡೆಯುತ್ತಿದೆ.  ಅಂದಹಾಗೆ ಕೆಜಿಎಫ್ ಸ್ಟಾರ್ ಸಹೋದರಿಗೆ ಬೆಲೆಬಾಳುವ ಒಡವೆ ಗಿಫ್ಟ್ ಕೊಟ್ಟಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ.