VR ಅಂದ್ರೆ ವಿಕ್ರಾಂತ್ ರೋಣ ಅಷ್ಟೇ ಅಲ್ಲ, ವಿ ರವಿಚಂದ್ರನ್‌ ಅಂತಾ ತಿಳ್ಕೋಬೇಕು: ರವಿಚಂದ್ರನ್

Jun 22, 2022, 9:33 PM IST

ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಟ್ರೇಲರ್ ಅಧಿಕೃತವಾಗಿ ರಿಲೀಸ್‌ ಆಗಲು ಕೌಂಟ್‌ಡೌನ್‌ ಶುರುವಾಗಿದೆ. ಆದರೆ ಇದಕ್ಕೂ ಮೊದಲು ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಿಷ್ಠಿತ ಓರಾಯನ್ ಮಾಲ್‌ನಲ್ಲಿ ಇಂದು ದೊಡ್ಡ ಕಾರ್ಯಕ್ರಮದ ಮೂಲಕ ಮಾಧ್ಯಮದವರಿಗೆ ಹಾಗೂ ಸಿನಿಮಾ ತಂಡದ ಸದಸ್ಯರಿಗೆ ‘ವಿಕ್ರಾಂತ್ ರೋಣ’ನ ದರ್ಶವನ್ನ ಮಾಡಿಸಲಾಯಿತು. ಟ್ರೇಲರ್ ನೋಡಿದ ಬಳಿಕ ರವಿಚಂದ್ರನ್ ವೇದಿಕೆ ಮೇಲೆ ಬಂದರು. ಈ ವೇಳೆ ಕಿಚ್ಚ ಸುದೀಪ್​ ಅವರ ಕೈ ಹಿಡಿದುಕೊಂಡು ವೇದಿಕೆ ಮೇಲೆ ಬಂದರು. ಸುದೀಪ್ ರವಿಚಂದ್ರನ್ ಮಗ ಅವನಿಗೆ ಭಯ ಇಲ್ಲ.

ವಿ ಆರ್ ಅಂದ್ರೆ  ವಿಕ್ರಾಂತ್ ರೋಣ ಅಷ್ಟೆ ಅಲ್ಲ. ವಿ ಆರ್ ಅಂದ್ರೆ ರವಿಚಂದ್ರನ್. ಪ್ರೇಮಲೋಕ ನೋಡಿದಾಗ ನಮ್ ಅಪ್ಪ ನನ್ನ ಹೆಗಲ ಮೇಲೆ ತಲೆಯಿಟ್ಟು ಅತ್ತಿದ್ರು. ಇವತ್ತು ನಾನು ಈ ಸಿನಿಮಾ ನೋಡಿ ಅಳ್ತಿನಿ ಅನ್ನಿಸ್ತಿದೆ. ಕನ್ನಡ ಇಂಡಸ್ಟ್ರಿಗೆ ದೃಷ್ಟಿ ತೆಗೆಯಬೇಕು. ಕನಸುಗಾರ ಅಂತ ನನಗೆ ಹೇಳ್ತಿದ್ರು ಇವತ್ತು ನನ್ನ ಜೊತೆ ಸಾಕಷ್ಟು ಜನ ಕನಸುಗಾರರು ಇದ್ದಾರೆ. ಜಾಕ್ವೆಲೀನ್ ಅವ್ರನ್ನ ಸಿನಿಮಾದಲ್ಲಿ ಯಾಕ್ ಹಾಕಿಕೊಂಡಿದ್ದಾರೆ ಗೊತ್ತಾ. ಜಾಕ್ ಮಂಜು ಪ್ರೋಡ್ಯೂಸರ್ ಅದಕ್ಕೆ ಎಂದು ರವಿಚಂದ್ರನ್ ಹಾಸ್ಯ ಮಾಡಿದರು. ಇನ್ನು ಮೂವತ್ತು ವರ್ಷ ಆದ ಮೇಲೆ ನನ್ನ ಮಗ ಇಂಡಸ್ಟ್ರಿಯನ್ನ ಬೇರೆಯದ್ದೆ ಲೆವೆಲ್‌ಗೆ ತಗೊಂಡು ಹೋಗ್ತಿದ್ದಾನೆ ಎಂದರು.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies