'ಒಂದೇ ಪದದಲ್ಲಿ' ಪತ್ನಿ ಗೀತಾ ಬಗ್ಗೆ ಶಿವಣ್ಣ ಏನಂತಾರೆ?

Jun 19, 2022, 4:02 PM IST

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇತ್ತೀಚಿಗಷ್ಟೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಭೈರಾಗಿ ಸಿನಿಮಾದ ಬಿಡುಗಡೆ ತಯಾರಿಯಲ್ಲಿರುವ ಶಿವಣ್ಣ ಪ್ರಮೋಷನ್‌ನಲ್ಲಿ ನಿರತರಾಗಿದ್ದಾರೆ. ಸಂದರ್ಶನದಲ್ಲಿ ಶಿವಣ್ಣ ಅನೇಕ ಇಂಟ್ರಸ್ಟಿಂಗ್ ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ. ಪತ್ನಿ ಗೀತ ಶಿವರಾಜ್ ಕುಮಾರ್ ಬಗ್ಗೆ ಮಾತನಾಡಿದ ಹ್ಯಾಟ್ರಿಕ್ ಹೀರೋ,  ನನ್ನ ಸ್ಟೈಲ್ ಹೀಗೆ ಅಂತ ಇರ್ತಾರೆ, ಅದು ತುಂಬಾ ಇಷ್ಟವಾಗುತ್ತದೆ ಎಂದು ಒಂದು ಪದದಲ್ಲಿ ಉತ್ತರಿಸಿದ್ದಾರೆ. ಇನ್ನು ಮಗಳು ನಿವೇದಿತಾ ಬಗ್ಗೆ ಮಾತನಾಡಿ ತುಂಬಾ ಬೋಲ್ಡ್ ಎಂದಿದ್ದಾರೆ. ಯವರಾಜ್ ರಾಜ್ ಕುಮಾರ್ ತುಂಬಾ ಚೂಸಿ ಅಂತೆ, ವಿನಯ್ ರಾಜ್ ಕುಮಾರ್ ತುಂಬಾ ಸೈಲೆಂಟ್ ಮತ್ತು ಮುದ್ದ ಎಂದು ಶಿವಣ್ಣ ಹೇಳಿದ್ದಾರೆ. ಅಪ್ಪು ಮಕ್ಕಳಾದ ವಂದಿತಾ ಮತ್ತು ಧೃತಿ ಬಗ್ಗೆ ಮಾತನಾಡಿ, ವಂದಿತಾ ಅಪ್ಪು ಹಾಗೆ ತುಂಬಾ ಮೃದು ಸ್ವಭಾವದವಳು, ಧೃತಿ ತುಂಬಾ ಕ್ಯೂಟ್, ದೊಡ್ಡಪ್ಪ ಅಂತ ಕರೆಯೋದೆ ಚಂದ ಎಂದು ಹೇಳಿದ್ದಾರೆ.