Rishab Shetty: 'ಹರಿಕಥೆ ಅಲ್ಲ ಗಿರಿಕಥೆ' ಹುಟ್ಟಿದ ಇಂಟ್ರೆಸ್ಟಿಂಗ್ ಕಥೆ

Jun 17, 2022, 12:31 PM IST

ರಿಷಬ್‌ ಶೆಟ್ಟಿ ನಟನೆಯ ‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರ ಇದೇ ಜೂ.23ಕ್ಕೆ ಬಿಡುಗಡೆ ಆಗುತ್ತಿದೆ. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಕರಣ್‌ ಅನಂತ್‌ ಹಾಗೂ ಅನಿರುದ್ಧ್ ಮಹೇಶ್‌ ನಿರ್ದೇಶನದ ಈ ಚಿತ್ರದಲ್ಲಿ ರಚನಾ ಇಂದರ್‌, ತಪಸ್ವಿನಿ ನಾಯಕಿಯರಾಗಿ ನಟಿಸಿದ್ದಾರೆ. ಈ ನಡುವೆ 'ಹರಿಕಥೆ ಅಲ್ಲ ಗಿರಿಕಥೆ' ಚಿತ್ರದ ಬಗ್ಗೆ ರಿಷಬ್‌ ಶೆಟ್ಟಿ ಸುವರ್ಣ ನ್ಯೂಸ್‌ಗೆ ಎಕ್ಸ್‌ಕ್ಲೂಸಿವ್ ಸಂದರ್ಶನ ಕೊಟ್ಟಿದ್ದಾರೆ. ಚಿತ್ರದ ಕಥೆ, ಮೇಕಿಂಗ್, ಕಚಗುಳಿಯಿಡುವ ಹಾಸ್ಯ ದೃಶ್ಯಗಳು ಸೇರಿದಂತೆ ತಮ್ಮ ಪಾತ್ರದ ಬಗ್ಗೆ ರಿಷಬ್‌ ಶೆಟ್ಟಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನವಿದ್ದು, ಪ್ರಮೋದ್ ಶೆಟ್ಟಿ, ಹೊನ್ನವಳ್ಳಿ ಕೃಷ್ಣ  ಸೇರಿದಂತೆ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies