Kantara; ಜಪಾನ್, ಯುಎಸ್‌ನಿಂದ ಸಿನಿಮಾಗೆ ಮೆಚ್ಚುಗೆ ಬರ್ತಿದೆ - ರಿಷಬ್ ಶೆಟ್ಟಿ ‌

Oct 7, 2022, 3:25 PM IST

ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾ ರಿಲೀಸ್ ಆಗಿ ಅದ್ಬುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಪ್ರೇಕ್ಷಕರು ಸಹ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ರಿಷಬ್ ಶೆಟ್ಟಿ ಪ್ರೆಸ್ ಮೀಟ್‌ನಲ್ಲಿ ಮಾತನಾಡಿದ್ದು ಈ ಸಿನಿಮಾಗೆ ಜಪಾನ್, ಯುಎಸ್‌ನಿಂದ ಮೆಚ್ಚುಗೆ ಬರ್ತಿದೆ ಎಂದು ಹೇಳಿದರು. ಬೇರೆ ಭಾಷೆಗೆ ಡಬ್ ಮಾಡುವ ಬಗ್ಗೆ ಮಾತನಾಡಿ ರಿಷಬ್ ಬೇರೆ ಬೇರೆ ಭಾಷೆಗೆ  ಡಬ್ ಮಾಡಿದ್ದರೆ ಇನ್ನು ತುಂಬಾ ತಡವಾಗುತ್ತಿತ್ತು ಹಾಗಾಗಿ ಮಾಡಿಲ್ಲ ಎಂದು ಹೇಳಿದರು. ಮನುಷ್ಯ ಹುಟ್ಟಿದಾಗಿನಿಂದ ಪ್ರಕೃತಿ ಜೊತೆಗಿನ ಸಂಘರ್ಷ ಇದೆ. ಹಾಗಾಗಿ ಬೇರೆ ಬೇರೆ ದೇಶದ ಜನರು ಸಿನಿಮಾ ನೋಡಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಜಪಾನ್, ಯುಎಸ್ ನಿಂದ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.