Vikrant Rona: ಇದು ಸೂಪರ್ ಹಿಟ್ ಆಗುವ ಎಲ್ಲಾ ಸೂಚನೆ ಇದೆ: ರಮೇಶ್ ಅರವಿಂದ್

Jun 22, 2022, 10:28 PM IST

ಓರಾಯನ್​ ಮಾಲ್​ನಲ್ಲಿ ಇಂದು 'ವಿಕ್ರಾಂತ್​ ರೋಣ' ಟ್ರೇಲರ್​​ ಲಾಂಚ್ ಕಾರ್ಯಕ್ರಮ ನಡೆಯಿತು. ಚಿತ್ರರಂಗದ ದಿಗ್ಗಜರು ಬಂದು ತ್ರಿಡಿಯಲ್ಲಿ ವಿಕ್ರಾಂತ್​ ರೋಣನ  ಟ್ರೇಲರ್​ ಕಣ್ಣು ತುಂಬಿಕೊಂಡರು. ಸಿನಿಮಾದ ಟ್ರೇಲರ್​ ನೋಡಿದ ಬಳಿಕ ಎಲ್ಲರೂ ವೇದಿಕೆ ಮೇಲೆ ಬಂದು ತಮ್ಮ ಅಭಿಪ್ರಾಯ ತಿಳಿಸಿದರು. ಈ ವೇಳೆ ನಟ ರಮೇಶ್ ಅರವಿಂದ್ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ನೋಡಿದಾಗ ಇದು ಇನ್ನೊಂದು ಜಗತ್ತಾ ಅನ್ನಿಸುತ್ತೆ. ಜುಮಾಂಜಿ, ಟಾರ್ಜನ್ ತರ ಇರುತ್ತೆ ಅನ್ಸುತ್ತೆ. ಕ್ಯಾಮೆರಾ ವರ್ಕ್, ಮ್ಯೂಸಿಕ್ ಸಖತ್ ಆಗಿದೆ. ನೀವು ಮಾಡಿರೋ ಕೆಲಸಕ್ಕೆ ಎಲ್ಲರ ಸಪೋರ್ಟ್ ಸಿಕ್ಕಿದೆ. ಇದು ಸೂಪರ್ ಹಿಟ್ ಆಗುವ ಎಲ್ಲಾ ಸೂಚನೆ ಇದೆ ಎಂದು ಚಿತ್ರದ ಬಗ್ಗೆ ರಮೇಶ್ ಹೇಳಿದರು.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies