ರಾಜ್ ಕುಟುಂಬಕ್ಕೂ ಹೊಂಬಾಳೆಗೂ ಬಿಡಿಸಲಾಗದ ಬಂಧ: ವಿಜಯ್ ಕಿರಗಂದೂರು ಹಿನ್ನೆಲೆ ಏನು ಗೊತ್ತಾ?

Apr 28, 2022, 3:25 PM IST

ಕನ್ನಡ ಸಿನಿಮಾಗಳ ಮಾರ್ಕೆಟ್‌ನ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಗೆಲ್ಲುವುದನ್ನ ತೋರಿಸಿಕೊಟ್ಟ ನಿರ್ಮಾಪಕ ವಿಜಯ್ ಕಿರಗಂದೂರು (Vijay Kiraganduru) ಸಕ್ಕರೆ ನಾಡು ಮಂಡ್ಯದ (Mandya) ರೈತ ಕುಟುಂಬದಲ್ಲಿ ಬಂದ ಇವ್ರು ಮಂಡ್ಯ ಜಿಲ್ಲೆ ಕಿರಗಂದೂರುನವ್ರು. 

ಕಿರಗಂದೂರಿನ ಪಟೇಲ್ ತಿಮ್ಮೇಗೌಡರ ಮೂರು ಸುಪುತ್ರರಲ್ಲಿ ವಿಜಯ್ ಕೂಡ ಒಬ್ರು. ಇವ್ರಿಗೆ ಇಬ್ಬರು ಸಹೋದರು. ವಿಜಯ್ ಅವರ ಅಣ್ಣ ಮಂಜುನಾಥ್ ಅವರು ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ರೆ, ಮತ್ತೊಬ್ಬ ಸಹೋದರ ಡಾ, ಸುಬ್ಬರಸುರವರು ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದ್ರೆ ಉದ್ಯಮಿಯಾಗಿ ಬೆಂಗಳೂರು ಸೇರಿದ ವಿಜಯ್ ಕಿರಗಂದೂರುರನ್ನ ಸೆಳೆದಿದ್ದು ಮಾತ್ರ ಬಣ್ಣದ ಜಗತ್ತು.

ಚಿಕ್ಕಪ್ಪ ಅಪ್ಪುಗಾಗಿ ಸಿದ್ಧವಾಗಿದ್ದ ಕಥೆಯಲ್ಲಿ ಯುವರಾಜ್‌ ಕುಮಾರ್...!

ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ವಿಜಯ್ ಕಿರಗಂದೂರು ತನ್ನ ಊರಿನ ಜನರಿಂದ ಅಪಾರ ಪ್ರೀತಿ ಗಳಿಸಿದ್ದಾರೆ. ತನ್ನೂರಲ್ಲಿ ಕಿರಗಂದೂರು ವಿಜಯಪ್ಪನರು ಅಂತಲೇ ಫೇಮಸ್ ಆಗಿರೋ ವಿಜಯ್ ಕಿರಗಂದೂರು ಈಗ ಕನ್ನಡ ಚಲನ ಚಿತ್ರರಂಗ ಮಾತ್ರ ಅಲ್ಲ ಭಾರತೀಯ ಚಿತ್ರರಂಗದ ಹೆಮ್ಮೆಯ ನಿರ್ಮಾಪಕರಾಗಿ ಅತ್ಯುತ್ತಮ ಸಿನಿಮಾಗಳನ್ನ ಕರುನಾಡಿಗೆ ನೀಡುತ್ತಿದ್ದಾರೆ. ಆ ಸಾಲಿಗೆ ಈಗ ಯುವ ರಾಜ್ ಕುಮಾರ್ರ ಮತ್ತೊಂದು ಸಿನಿಮಾ ಕೂಡ ಸೇರಿಕೊಳ್ಳುತ್ತಿದೆ. 

ವಿಜಯ್ ಕಿರಗಂಗೂದು ಬರೀ ನಿರ್ಮಾಪಕ, ಉಧ್ಯಮಿಯಾಗಿ ಹಣ ಮಾಡಿಕೊಂಡು ಹೋಗುತ್ತಿಲ್ಲ. ಬಡವರಿಗೂ ವಿಜಯ್ ಕಿರಗಂದೂರು ಲೆಕ್ಕಕ್ಕೇ ಇಲ್ಲದಷ್ಟು ಸಹಾಯ ಮಾಡಿದ್ದಾರೆ. ಕಳೆದ ಕೋವಿಡ್ ಸಮಯದಲ್ಲಿ ಆದ ಘಟನೆಯಿಂದ ನೊಂದು ಮುಂದೆಂದೂ ಇಂತಹ ಸಮಸ್ಯೆ ಎದುರಾಗಬಾರದು ಅಂತ ಕೆಆರ್ಪೆ ಮತ್ತು ಪಾಂಡವ ಪುರದಲ್ಲಿ ಎರಡು ಆಕ್ಸಿಜೆನ್ ಉತ್ಪಾಧನಾ ಘಟಕೆ ಸ್ಥಾಪಿಸಿದ್ದಾರೆ. ವಿದ್ಯಾರ್ಥಿಗಳು, ತಮ್ಮ ಊರಿನ ಜನರ ಹಲವು ಕಷ್ಟಗಳಿಗೆ ಸ್ಪಂದಿಸಿರೋ ವಿಜಯ್ ಕಿರಗಂದೂರು ವಯಸ್ಸಾದವರಿಗೆ ವೃದ್ದಾಪ್ಯ ವೇತನ ಸಿಗವಂತೆ ಮಾಡಿದ್ದಾರೆ.