ಶನಿವಾರ ಮುಂಜಾನೆ ಇರಾನ್ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿತು. ಇದು ಇಸ್ರೇಲ್‌ನಿಂದ ಇರಾನ್ ಮೇಲಿನ ಮೊದಲ ಅಧಿಕೃತ ದಾಳಿಯಾಗಿದ್ದರೂ, ಹಿಂದೆ ಹಲವು ರಹಸ್ಯ ದಾಳಿಗಳು ನಡೆದಿವೆ.
ಟೆಲ್ ಅವಿವ್: ಶನಿವಾರ ಮುಂಜಾವಿನಲ್ಲಿ ಇರಾನ್ ಮೇಲೆ ಇಸ್ರೇಲ್ ಭೀಕರ ಕ್ಷಿಪಣಿ ದಾಳಿ ನಡೆಸಿದೆ. ಇದು ಇರಾನ್ ಮೇಲೆ ಇಸ್ರೇಲ್ ನಡೆಸಿದ ಮೊದಲ ಅಧಿಕೃತ ದಾಳಿ. ಆದರೆ ಇದಕ್ಕೂ ಮೊದಲು ಇರಾನ್ ಗುರಿಯಾಗಿಸಿ ಇಸ್ರೇಲ್ ಹಲವು ದಾಳಿ ನಡೆಸಿ ಹಲವು ‘ಉಗ್ರ’ ನಾಯಕರನ್ನು ಬಲಿ ಪಡೆದಿದೆ. ಆದರೆ ಇವೆಲ್ಲವೂ ರಹಸ್ಯ ದಾಳಿಗಳು. ಹೀಗಾಗಿ ದಾಳಿಗೊಳಗಾದ ಇರಾನ್ ಕೂಡಾ ನೇರವಾಗಿ ಇಸ್ರೇಲ್ ಮೇಲೆ ಆರೋಪ ಹೊರಿಸಲು ಆಗಿರಲಿಲ್ಲ, ಇಸ್ರೇಲ್ ಕೂಡಾ ದಾಳಿ ಹೊತ್ತುಕೊಂಡಿರಲಿಲ್ಲ.
ಹಿಂದಿನ ದಾಳಿಗಳು.
undefined
1. ರೆವಲ್ಯೂಷನರಿ ಗಾರ್ಡ್ ಅಥವಾ ಇರಾನ್ ಸೇನೆ ಮೊದಲಿನಿಂದಲೂ ಇಸ್ರೇಲಿಗಳ ಗುರಿಯಾಗಿತ್ತು. ಇರಾನ್ ರಾಜಧಾನಿ ತೆಹ್ರಾನ್‌ನಲ್ಲಿದ್ದ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆನನ್ನು ಜು.31ರಂದು ಇಸ್ರೇಲ್ ವಾಯುದಾಳಿ ಮಾಡಿ ಹತ್ಯೆ ಮಾಡಿತ್ತು. ಬಳಿಕ ಸೆ.27ರಂದು ಲೆಬನಾನ್‌ನ ಬೈರೂತ್‌ನಲ್ಲಿ ಹೆಜ್ಬುಲ್ಲಾ ಉಗ್ರ ನಾಯಕ ಹಸನ್ ನಸ್ರಲ್ಲಾ ಮೇಲೆ ನಡೆಸಿದ ಬಾಂಬ್ ದಾಳಿಯಲ್ಲಿ ಇರಾನ್‌ನ ಸೇನಾ ನಾಯಕನೊಬ್ಬ ಕೂಡ ಹತನಾಗಿದ್ದ.
2. ಕಳೆದ ಏ.1ರಂದು ಡಮಾಸ್ಕಸ್‌ನಲ್ಲಿನ ಇರಾನ್ ರಾಯಭಾರ ಕಚೇರಿಗೆ ಹೊಂದಿಕೊಂಡ ಕಟ್ಟದ ಮೇಲೆ ನಡೆದ ದಾಳಿಯಲ್ಲಿ ರೆವಲ್ಯೂಷನರಿ ಗಾರ್ಡ್‌ಗೆ ಸೇರಿದ ಹಲವು ನಾಯಕರ ಹತ್ಯೆ.
3. 2022 ಮತ್ತು 2023ರಲ್ಲಿ ಸಿರಿಯಾದ ಮೇಲೆ ನಡೆದ ಎರಡು ಪ್ರತ್ಯೇಕ ದಾಳಿಯಲ್ಲಿ ರೆವಲ್ಯೂಷನರಿ ಗಾರ್ಡ್‌ಗೆ ಸೇರಿದ ಇಬ್ಬರು ಕಮಾಂಡರ್‌ಗಳ ಸಾವು.
4. 2022ರ ಮೇ ತಿಂಗಳಲ್ಲಿ ಇರಾನ್ ಕ್ವಾಡ್ ಪೋರ್ಸ್ ನಾಯಕ ಸಯ್ಯದ್ ಖೋಡೇಯಿನನ್ನು ಬೈಕ್‌ನಲ್ಲಿ ಬಂದ ಇಬ್ಬರು ಆಗಂತಕರು ಗುಂಡಿಟ್ಟು ಹತ್ಯೆ ಮಾಡಿದ್ದರು. ಇದರ ಹಿಂದೆ ತನ್ನ ಕೈವಾಡವಿದೆ ಎಂದು ಇಸ್ರೇಲ್ ಅಮೆರಿಕಕ್ಕೆ ರಹಸ್ಯ ಮಾಹಿತಿ ನೀಡಿತ್ತಂತೆ.
5. 2011ರಲ್ಲಿ ಟೆಹ್ರಾನ್ ಸಮೀಪವೇ, ಇರಾನ್ ಶಸ್ತ್ರಾಸ್ತ್ರ ಯೋಜನೆಯ ರೂವಾರಿ ಹಸ್ಸನ್ ಮೊಘದಂನನ್ನು ಹತ್ಯೆ ಮಾಡಲಾಗಿತ್ತು. ಇದರ ಹಿಂದೆ ಅಮೆರಿಕ ಮತ್ತು ಇಸ್ರೇಲ್‌ನ ಕೈವಾಡದ ಶಂಕೆ ವ್ಯಕ್ತವಾಗಿತ್ತು.
6. 2020ರಲ್ಲಿ ಇರಾನ್‌ನ ಪರಮಾಣು ಯೋಜನೆ ರೂವಾರಿ, ವಿಜ್ಙಾನಿ ಮೊಹ್ಸೇನ್ ಫಖ್ರಿಝಾದೇಹ್‌ನನ್ನು ಹತ್ಯೆ ಮಾಡಲಾಗಿತ್ತು. ಅದರ ಹಿಂದೆಯೂ ಇಸ್ರೇಲ್ ಕೈವಾಡದ ಶಂಕೆ ವ್ಯಕ್ತವಾಗಿತ್ತು.
ಮಸೀದಿಗಳಿಲ್ಲದ ದೇಶಗಳು; ಇಲ್ಲಿ ಮುಸ್ಲಿಮರಿಗೂ, ಇಸ್ಲಾಂ ಪ್ರಚಾರಕ್ಕೂ ಬ್ಯಾನ್
7. ಕಳೆದ ಕೆಲ ವರ್ಷಗಳಲ್ಲಿ ಇರಾನ್ ಪರಮಾಣು ಯೋಜನೆಗಳಲ್ಲಿ ನಿರತರಾಗಿದ್ದ ವಿಜ್ಞಾನಿಗಳಾದ ಮೊಸ್ತಫಾ ಅಹಮದಿ ರೋಶನ್, ಮಾಜಿದ್ ಶಾಹ್ರಿರಿ, ಮಸ್ಸೌದ್ ಅಲಿ ಮೊಹಮ್ಮದಿ ಮೊದಲಾದವರು ನಿಗೂಢವಾಗಿ ಸಾವನ್ನಪ್ಪಿದ್ದರು. ಇದರ ಹಿಂದೆಯೂ ಇಸ್ರೇಲ್ ಕೈವಾಡವನ್ನು ಶಂಕಿಸಲಾಗಿತ್ತು.
8. 2021ರಲ್ಲಿ ಇರಾನ್ ನಟಾನ್ಜ ಪರಮಾಣು ಘಟಕದಲ್ಲಿ ಲಘು ಸ್ಫೋಟ ಸಂಭವಿಸಿತ್ತು. ಇದರಲ್ಲಿ ಇಸ್ರೇಲ್ ಕೈವಾಡವಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಆರೋಪಿಸಿತ್ತು.
9. 2019ರಲ್ಲಿ ಸಿರಿಯಾದ ಮೂಲಕ ಹಾದು ಹೋಗುವ ಇರಾನಿ ತೈಲ ಪೈಪ್‌ಗಳ ಮೇಲೆ ಸರಣಿ ದಾಳಿ ನಡೆದಿತ್ತು. ಇದರಲ್ಲೂ ಇಸ್ರೇಲ್ ಕೈವಾಡವಿತ್ತು ಎಂದು ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿತ್ತು.
ಇರಾನ್ ಮೇಲೆ ಇಸ್ರೇಲ್ 200 ಕ್ಷಿಪಣಿಗಳ ಸುರಿಮಳೆ: ನಾಲ್ವರು ಯೋಧರು ಬಲಿ