777 ಚಾರ್ಲಿ ಚಿತ್ರದ ಅನುಭವ ಹಂಚಿಕೊಂಡ ಸಂಗೀತ ನಿರ್ದೇಶಕ ನೋಬಿನ್‌ ಪೌಲ್‌!

Jun 6, 2022, 9:57 PM IST

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಸಿನಿಮಾ ತೆರೆಗೆ ಬರಲು ದಿನಗಣನೆ ಆರಂಭವಾಗಿದೆ. ಜೂನ್ 10ರಂದು ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್‌ ಮಾಡಲು ರಕ್ಷಿತ್ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್ ಸಖತ್ ಮೋಡಿ ಮಾಡಿದೆ. ಈ ನಡುವೆ 777 ಚಾರ್ಲಿ ಸಂಗೀತ ನಿರ್ದೇಶಕ ನೋಬಿನ್‌ ಪೌಲ್‌ ಸಿನಿಮಾಗೆ ಸಂಗೀತ ನೀಡುವಾಗ ಎದುರಾದ ಸವಾಲು ಹಾಗೂ ಅನುಭವಗಳನ್ನು ಏಷ್ಯಾನೆಟ್ ಸುವರ್ಣನ್ಯೂಸ್‌ ಜೊತೆ ಹಂಚಿಕೊಂಡಿದ್ದಾರೆ. 

ಪ್ಯಾನ್ ಇಂಡಿಯಾದಲ್ಲಿ ಚಾರ್ಲಿ ಹವಾ ಜೋರು; ಐಎಂಡಿಬಿ ನಲ್ಲಿ ಅತೀ ಹೆಚ್ಚು ರೇಟಿಂಗ್ ಪಡೆದ ಸಿನಿಮಾ

ನಟ ರಕ್ಷಿತ್ ಶೆಟ್ಟಿ ಈ ಸಿನಿಮಾದಲ್ಲಿ ಧರ್ಮ ಅನ್ನೋ ಪಾತ್ರವನ್ನು ನಿಭಾಯಿಸಿದ್ದಾರೆ. ಶ್ವಾನ ಮತ್ತು ಮನುಷ್ಯನ ನಡುವಿನ ಒಡನಾಟದ ಕಥೆಯನ್ನು ಈ ಸಿನಿಮಾ ಹೊಂದಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಸಂಗೀತಾ ಶೃಂಗೇರಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ, ರಾಜ್‌ ಬಿ. ಶೆಟ್ಟಿ, ದಾನಿಶ್‌ ಸೇಠ್‌, ತಮಿಳಿನ ಬಾಬಿ ಸಿಂಹ ಮುಂತಾದವರು ನಟಿಸಿದ್ದಾರೆ. ಇನ್ನು ಪರಮಃ ಸ್ಟುಡಿಯೋಸ್ ನಿರ್ಮಾಣದಲ್ಲಿ ಮೂಡಿಬಂದಿರುವ '777 ಚಾರ್ಲಿ' ಸಿನಿಮಾವನ್ನು ಕಿರಣ್‌ರಾಜ್‌ ನಿರ್ದೇಶನ ಮಾಡಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾ. 

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies