Max Climax Look: ಹೇಗಿದೆ ಗೊತ್ತಾ ಕಿಚ್ಚನ ಮ್ಯಾಕ್ಸ್ ಸಿನಿಮಾ ಕ್ಲೈಮ್ಯಾಕ್ಸ್? ಇದರ ಫೋಟೊ ಹಂಚಿಕೊಂಡ ಸುದೀಪ್!

Jan 5, 2024, 10:05 AM IST

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಟೈಟಲ್ ಟೀಸರ್ ಅನಾವರಣಗೊಂಡು ಸಿನಿಪ್ರಿಯರ ಕುತೂಹಲ ಹೆಚ್ಚಿಸಿತ್ತು. ಇದೀಗ ಸ್ವತಃ  ಸುದೀಪ್ ಕ್ಲೈಮ್ಯಾಕ್ಸ್ ಫೋಟೋವೊಂದನ್ನು ಹಂಚಿಕೊಂಡು ಪ್ರೇಕ್ಷಕರ ಕುತೂಹಲ ಹೆಚ್ಚಿಸಿದ್ದಾರೆ. ಹೇಗಿದೆ “Maxxxx” climaxx ಲುಕ್? ಅನ್ನೋ ಸಾಲುಗಳನ್ನ ಬರೆದು ಸುದೀಪ್ ಫೋಟೋವನ್ನ ಹಂಚಿಕೊಂಡಿದ್ದಾರೆ. ಸುದೀಪ್(Sudeep) ಅಭಿನಯದ ಮ್ಯಾಕ್ಸ್ ಚಿತ್ರದ(Max Movie) ಒಂದು ಟೀಸರ್ ರಿಲೀಸ್ ಆಗಿದೆ. ಒಂದೆರಡು ಪೋಸ್ಟರ್ ಹೊರ ಬಂದಿವೆ. ಅದು ಬಿಟ್ರೆ, ಮ್ಯಾಕ್ಸ್ ಸಿನಿಮಾದ ಸುತ್ತ ವಿವಿಧ ಇಂಟ್ರಸ್ಟಿಂಗ್ ಸುದ್ದಿಗಳೇ ಹರಿದಾಡುತ್ತಲೇ ಕೇಳಿ ಬರುತ್ತಿವೆ. ಆದರೆ ಅಧಿಕೃತವಾಗಿಯೇ ಇನ್ನೂ ಯಾವುದೇ ಮಾಹಿತಿ ಹೊರ ಬಂದಿಲ್ಲ ಅನ್ನೊ ಮಾತು ಇದೆ. ಇದರ ಬೆನ್ನಲ್ಲಿಯೇ ಸುದೀಪ್ ಕಿಚ್ಚ ಕ್ರಿಯೇಷನ್ಸ್ ಟ್ವಿಟರ್ ಪೇಜ್‌ನಲ್ಲಿ ಒಂದು ಫೋಟೋ ಶೇರ್ ಆಗಿದೆ. ಇದಕ್ಕೆ “ಹೇಗಿದೆ “Maxxxx” climaxx ಲುಕ್?” ಅಂತಲೂ ಬರೆಯಲಾಗಿದೆ. ಕಿಚ್ಚ ಸುದೀಪ್ ತಮ್ಮ ಮ್ಯಾಕ್ಸ್ ಚಿತ್ರದ ಕ್ಲೈಮ್ಯಾಕ್ಸ್ ಲುಕ್(Climax Look) ಅನ್ನ ಇದೀಗ ಹೀಗೆ ಎಲ್ಲರ ಜೊತೆಗೆ ಹಂಚಿಕೊಂಡಿದ್ದಾರೆ . ಮ್ಯಾಕ್ಸ್ ಸಿನಿಮಾಗೆ ವಿಜಯ್ ಕಾರ್ತಿಕೇಯನ್ ನಿರ್ದೇಶನ ಅಜನೀಶ್ ಲೋಕನಾಥ್ ಸಂಗೀತ ಕೊಟ್ಟಿದ್ದಾರೆ. ಶೇಖರ್ ಚಂದ್ರ ಕ್ಯಾಮರಾವರ್ಕ್ ಮಾಡಿದ್ದಾರೆ. ಕನ್ನಡದ ಕಲಾವಿದರೂ ಈ ಚಿತ್ರದಲ್ಲಿ ನಟಿಸಿದ್ದಾರೆ. ಮೂರು ಜನ ಹೀರೋಯಿನ್ಗಳೂ ಕಿಚ್ಚನ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ವೀಕ್ಷಿಸಿ:  Swati Mishra: ರಾಮನ ಭಜನೆ ಮೂಲಕ ಮೋದಿ ಮನ ಗೆದ್ದ ಗಾಯಕಿ! ಯಾರು ಈ ಸ್ವಾತಿ ಮಿಶ್ರಾ?