ಈಗಾಗಲೇ ಬಿಹಾರದಲ್ಲಿ ಹಸುಗಳು, ಕರುಗಳ ಹತ್ಯೆಯನ್ನು ನಿಷೇಧಿಸಲಾಗಿದ್ದು, 15 ವರ್ಷಕ್ಕಿಂತ ಮೇಲ್ಪಟ್ಟ ಹೋರಿಗಳು ಮತ್ತು ಹೋರಿಗಳ ಹತ್ಯೆಯನ್ನು ನಿಷೇಧಿಸಲಾಗಿದೆ. ಉಲ್ಲಂಘಿಸುವವರಿಗೆ 6 ತಿಂಗಳ ಜೈಲು ಮತ್ತು ಅಥವಾ 1,000 ರು. ದಂಡ ವಿಧಿಸಲಾಗುತ್ತದೆ.
ಪಟನಾ(ಮೇ.18): ‘ಎನ್‌ಡಿಎ ಮೈತ್ರಿ ಕೂಟ ಮೂರನೇ ಬಾರಿ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಗೋಹತ್ಯೆಯನ್ನು ನಿಷೇಧಿಸುತ್ತದೆ ಮತ್ತು ಗೋವುಗಳ ಕಳ್ಳ ಸಾಗಣೆಯಲ್ಲಿ ತಲೆಕೆಳಗಾಗಿ ಗಲ್ಲಿಗೇರಿಸುತ್ತೇವೆ’ ಎಂದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಬಿಹಾರದ ಮಧುಬನಿ ಮತ್ತು ಸೀತಾಮಢಿಯಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಶಾ,‘ನರೇಂದ್ರ ಮೋದಿ ಮೂರನೇ ಬಾರಿ ಅಧಿಕಾರಕ್ಕೆ ಬಂದರೆ ಗೋ ಹತ್ಯೆ ಮತ್ತು ಗೋವು ಕಳ್ಳ ಸಾಗಾಣಿಕೆಗೆ ಅವಕಾಶ ನೀಡಲ್ಲ’ (‘ಗೌ ಹತ್ಯಾ ಕರ್ನೆ ವಾಲೋನ್ ಕೋ ಉಲ್ಟಾ ಲಟ್ಕಾ ಕರ್ ಸಿದ್ಧ ಕರ್ ದೇಂಗೆ. ನಾ ಗೈ ಕಿ ತಸ್ಕರಿ ಹೋನೆ ಡೇಂಗೆ, ನಾ ಹತ್ಯಾ) ಎಂದು ಹೇಳಿದ್ದಾರೆ.
ನೂರಾರು ಕೋಟಿ ಆಸ್ತಿ ಇದ್ದರೂ ಕಾರಿಲ್ಲದ ರಾಜಕಾರಣಿಗಳಿವರು!
ಈಗಾಗಲೇ ಬಿಹಾರದಲ್ಲಿ ಹಸುಗಳು, ಕರುಗಳ ಹತ್ಯೆಯನ್ನು ನಿಷೇಧಿಸಲಾಗಿದ್ದು, 15 ವರ್ಷಕ್ಕಿಂತ ಮೇಲ್ಪಟ್ಟ ಹೋರಿಗಳು ಮತ್ತು ಹೋರಿಗಳ ಹತ್ಯೆಯನ್ನು ನಿಷೇಧಿಸಲಾಗಿದೆ. ಉಲ್ಲಂಘಿಸುವವರಿಗೆ 6 ತಿಂಗಳ ಜೈಲು ಮತ್ತು ಅಥವಾ 1,000 ರು. ದಂಡ ವಿಧಿಸಲಾಗುತ್ತದೆ.