Apr 11, 2022, 5:20 PM IST
ಮಾರ್ಟಿನ್ (Martin) ಸಿನಿಮಾ ಒಂದೇ ಒಂದು ಫಸ್ಟ್ ಲುಕ್ ಮೋಷನ್ ಪೋಸ್ಟರ್ನಿಂದ ಇಡೀ ದೇಶವೇ ಎದುರು ನೋಡುವಂತೆ ಮಾಡಿದೆ. ಈ ಸಿನಿಮಾದ ಕ್ವಾಲಿಟಿ ಬಗ್ಗೆ ಬಣ್ಣದ ಜಗತ್ತು ಮಾತಾಡಿಕೊಳ್ಳುತ್ತಿದೆ. ಈ ಮಾರ್ಟಿನ್ ಹಿಂದಿನ ಶಕ್ತಿ ನಿರ್ಮಾಪಕ ಉದಯ್ ಕೆ ಮೆಹ್ತಾ (Uday K Mehta). ಕಿಚ್ಚ ಸುದೀಪ್ ಅವರ ಬಚ್ಚನ್, ಹಾಗು ಕೃಷ್ಣನ್ ಲವ್ ಸ್ಟೋರಿಯಂತಹ ಹಿಟ್ ಸಿನಿಮಾಗಳನ್ನ ಕೊಟ್ಟಿರೋ ಉದಯ್ ಕೆ ಮೆಹ್ತಾ ಮಾರ್ಟಿನ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಭರ್ಜರಿ ಸಿನಿಮಾ ಆದ ಬಳಿಕ ಧ್ರುವ ಸರ್ಜಾ ನಿರ್ಮಾಪಕ ಉದಯ್ ಕೆ ಮೆಹ್ತಾಗೆ ತನ್ನ ಕಾಲ್ ಶೀಟ್ ಕೊಟ್ಟಿದ್ದರು. ಆದರೆ ಅದಕ್ಕೂ ಮೊದಲು ಪೊಗರು ಸಿನಿಮಾ ಮುಗಿಸಬೇಕಾದ ಕಾರಣ ಉದಯ್ ಕೆ ಮೆಹ್ತಾ ಧ್ರುವ ಸರ್ಜಾಗಾಗೆ (Dhruva Sarja) ಬರೋಬ್ಬರಿ 6 ವರ್ಷ ಕಾದರು.
Dhruva Sarja: ಮಂತ್ರಾಲಯಕ್ಕೆ ತೆರಳಿ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದ ಮಾರ್ಟಿನ್
ಯಾಕಂದ್ರೆ ಬಾಕ್ಸಾಫೀಸ್ ಗೆಲ್ಲೋ ವಿಷಯಲ್ಲಿ ಧ್ರುವ ಕ್ಯಾಲಿಬರ್ ಬಗ್ಗೆ ಉದಯ್ ಕೆ ಮೆಹ್ತಗೆ ಗೊತ್ತಿದೆ. ಹೀಗಾಗಿ ಈಗ ಮಾರ್ಟಿನ್ಗೆ ಹ್ಯೂಜ್ ಬಜೆಟ್ ಇನ್ವೆಷ್ಟ್ ಮಾಡಿರೋ ಉದಯ್ ಕೆ ಮೆಹ್ತಾ ಈ ಸಿನಿಮಾವನ್ನ ಕನ್ನಡ, ಹಿಂದಿ, ತಮಿಳು, ತೆಲುಗು, ಮಲೆಯಾಳಂ ಅಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಉದಯ್ ಕೆ ಮೆಹ್ತಾ ಸ್ಯಾಂಡಲ್ವುಡ್ನ ಫ್ಯಾಷನಿಟ್ ಪ್ರೊಡ್ಯೂಸರ್. ಇವರ ವಿಷನ್ ಹೇಗಿದೆ ಅಂದ್ರೆ ಮಾರ್ಟಿನ್ ಸಿನಿಮಾವನ್ನ ಕೆಜಿಎಫ್ ಸಿನಿಮಾದ ಹಾಗೆ ಕರ್ನಾಟಕದ ಗಡಿಯಾಚೆಗಿನ ಸಿನಿಮಾ ಪ್ರೇಕ್ಷಕರಿಗೆ ತಲುಪಿಸೋ ಪ್ಲಾನ್ ಮಾಡಿದ್ದಾರೆ. ಹೀಗಾಗಿ ಬಹು ಕೋಟಿ ವೆಚ್ಚದಲ್ಲಿ ಮಾರ್ಟಿನ್ ಸಿನಿಮಾವನ್ನ ಸಿದ್ಧಪಡಿಸುತ್ತಿರೋ ಉದಯ್ ಕೆ ಮೆಹ್ತಾ ಈ ಸಿನಿಮಾವನ್ನ ಸೆಪ್ಟೆಂಬರ್ 30ಕ್ಕೆ ಬೆಳ್ಳಿತೆರೆ ಮೇಲೆ ತರಲಿದ್ದಾರೆ.
ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies