May 10, 2023, 3:12 PM IST
ಕರ್ನಾಟಕ ವಿಧಾನಸಭೆ ಚುನಾವಣೆ ಇಂದು (ಮೆ 10) ನಡೆಯುತ್ತಿದೆ. ರಾಜ್ಯದ ಜನತೆ ಮತಗಟ್ಟೆ ಬಳಿ ಸರತಿ ಸಾಲಿನಲ್ಲಿ ನಿಂತು ತಮ್ಮ ಅಮೂಲ್ಯ ಮತ ಚಲಾಯಿಸುತ್ತಿದ್ದಾರೆ. ಸಾಮಾನ್ಯರಂತೆ ಸಿನಿ ಸೆಲೆಬ್ರಿಟಿಗಳು ಸಹ ಮತದಾನ ಮಾಡುತ್ತಿದ್ದಾರೆ. ನಟ ರಮೇಶ್ ಅರವಿಂದ್ ಸಹ ಇಂದು ಬೆಳಗ್ಗೆಯೇ ವೋಟ್ ಮಾಡಿದ್ದಾರೆ. ಮತದಾನ ಮಾಡಿ ಮಾತನಾಡಿದ ರಮೇಶ್ ಇಷ್ಟು ದೊಡ್ಡ ಕ್ಯೂ ನಾನು ಯಾವತ್ತು ನೋಡಿರಲಿಲ್ಲ ಎಂದು ಹೇಳಿದರು. ಈ ಬಾರಿ ಜಾಸ್ತಿ ಇದೆ. ಅದು ತುಂಬಾ ಖುಷಿಯಾಗುತ್ತದೆ ಎಂದು ಹೇಳಿದರು. ಒಂದು ಮತ ಕೂಡ ತುಂಬಾ ಮುಖ್ಯವಾಗುತ್ತದೆ. ಒಂದೊಂದು ವೋಟು ಸೇರಿ ಪ್ರಜಾಪ್ರಭುತ್ವವಾಗುತ್ತದೆ ಎಂದು ಹೇಳಿದ್ದಾರೆ.