ನಿಮ್ಮ ಜಾತಕದಲ್ಲಿ ದೋಷಗಳಿದ್ದಲ್ಲಿ ಪಾರಾಗಲು ದೀಪಾವಳಿಯಂದು ಹೀಗೆ ಮಾಡಿ!

By Bhavani BhatFirst Published Oct 30, 2024, 10:00 PM IST
Highlights

ನಿಮ್ಮ ಜಾತಕದಲ್ಲಿ ಯಾವ ಯಾವ ದೋಷವಿದೆ, ಅದು ಹೇಗೆ ಇರುತ್ತದೆ, ಅವು ಇದ್ದಾಗ ಯಾವ ಸಮಸ್ಯೆಗಳು ಎದುರಾಗುತ್ತವೆ, ದೀಪಾವಳಿಯಂದು ಅದರ ಪರಿಹಾರವೇನು ಎಂಬ ಬಗ್ಗೆ ನೋಡೋಣ ಬನ್ನಿ.
 

ವ್ಯಕ್ತಿಯ ಹುಟ್ಟಿನ ಸಮಯ, ಘಳಿಗೆ ಹಾಗೂ ದಿನದ ಮೇಲೆ ಜಾತಕವನ್ನು ಬರೆಯಲಾಗುತ್ತದೆ. ಇಲ್ಲಿ ನಕ್ಷತ್ರ, ರಾಶಿ, ಪಾದ, ಗ್ರಹಗತಿಗಳು ಸೇರಿದಂತೆ ಅನೇಕ ವಿಷಯಗಳು ಅಡಕವಾಗಿರುತ್ತವೆ. ಇವುಗಳ ಮೇಲೆ ಶುಭಾಶುಭಗಳನ್ನು ಪಟ್ಟಿ ಮಾಡಲಾಗುತ್ತದೆ. ಕೆಲವು ಜಾತಕದಲ್ಲಿ ಕೆಲವು ರೀತಿಯ ದೋಷಗಳು ಇರುತ್ತವೆ. ಈ ದೋಷಗಳಿಗೆ ಪರಿಹಾರಗಳೂ ಸಾಕಷ್ಟು ಇವೆ. ದೀಪಾವಳಿ ಎಂಬುದು ಮೂರುದಿನಗಳ ದೈವಾನುಗ್ರಹದ ಶುಭಸಮಯ. ಇಂಥ ಸಮಯದಲ್ಲಿ ನೀವು ಈ ಕೆಳಗಿನ ಪರಿಹಾರಗಳನ್ನು ಮಾಡುವ ಮೂಲಕ ಆ ದೋಷಗಳಿಂದ ಪಾರಾಗಬಹುದು. 

ಹಾಗಾದರೆ, ನಿಮ್ಮ ಜಾತಕದಲ್ಲಿ ಯಾವ ಯಾವ ದೋಷವಿದೆ, ಅದು ಹೇಗೆ ಇರುತ್ತದೆ, ಅವು ಇದ್ದಾಗ ಯಾವ ಸಮಸ್ಯೆಗಳು ಎದುರಾಗುತ್ತವೆ, ದೀಪಾವಳಿಯಂದು ಅದರ ಪರಿಹಾರವೇನು ಎಂಬ ಬಗ್ಗೆ ನೋಡೋಣ ಬನ್ನಿ.

Latest Videos

ಶನಿ ದೋಷ: ಜಾತಕದಲ್ಲಿ ಶನಿದೋಷವಿದ್ದರೆ ಬಹಳ ಅಶುಭ ಎಂದು ಹೇಳಲಾಗುತ್ತದೆ. ಶನಿ ದೋಷವಿದ್ದಾಗ ವ್ಯಕ್ತಿಗೆ ಸಮಾಜದಲ್ಲಿ ಅವಮಾನಗಳಂತಹ ಪ್ರಸಂಗಗಳು ಎದುರಾಗುವುದಲ್ಲದೆ, ಯಶಸ್ಸು ಸಹ ಲಭಿಸುವುದಿಲ್ಲ. ಇವೆಲ್ಲವುಗಳ ಜೊತೆಗೆ ಉದ್ಯಮ ಮತ್ತು ವ್ಯಾಪಾರದಲ್ಲಿ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಈ ಎಲ್ಲ ಸಮಸ್ಯೆಗಳು ಕಾಡುತ್ತವೆ. ದೀಪಾವಳಿಯಂದು ಎಳ್ಳುದಾನ, ಶನಿ ದೇವಾಲಯದಲ್ಲಿ ದೀಪ ಹಚ್ಚುವುದು ಮಾಡಿ. ಆಂಜನೇಯ ದರ್ಶನ, ಹನುಮಾನ್‌ ಚಾಲೀಸ ಪಠಣ ಮಾಡಿ. 

ಕುಜ ದೋಷ: ಈ ಜಾತಕದ ಲಗ್ನದಲ್ಲಿ,ನಾಲ್ಕನೇ, ಐದನೇ, ಏಳನೇ, ಎಂಟನೇ ಅಥವಾ ಹತ್ತನೇ ಮನೆಯಲ್ಲಿ ಮಂಗಳ ಗ್ರಹವಿದ್ದಾಗ ಮಂಗಳ ದೋಷ ಉಂಟಾಗುತ್ತದೆ. ಕುಜದೋಷವಿದ್ದಾಗ ವಿವಾಹ ವಿಳಂಬ, ವಿವಾಹದಲ್ಲಿ ತೊಂದರೆ, ವಿವಾಹಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಷ್ಟೇ ಅಲ್ಲದೇ ರಕ್ತಕ್ಕೆ ಸಂಬಂಧಿಸಿದ ರೋಗಗಳಿಂದ ಬಳಲಬೇಕಾಗುತ್ತದೆ, ಭೂಮಿ, ಆಸ್ತಿಗೆ ಸಂಬಂಧಿಸಿದ ಸಮಸ್ಯೆ ಸಹ ಎದುರಾಗುವ ಸಾಧ್ಯತೆ ಇರುತ್ತದೆ. ದೀಪಾವಳಿಯಂದು ದನಗಳಿಗೆ ಶುದ್ಧ ಆಹಾರ ನೀಡಿ. ಕಾಗೆಗಳಿಗೆ ಆಹಾರ ಕೊಡಿ. ಸಾಧ್ಯವಾದಷ್ಟು ದಾನ ಮಾಡಿ. ಲಲಿತಾ ಸಹಸ್ರನಾಮ ಪಠಿಸಿ. 

ಕಾಳಸರ್ಪ ದೋಷ: ಜಾತಕದಲ್ಲಿನ ರಾಹು-ಕೇತುವಿನಿಂದ ಉಂಟಾಗುವ ದೋಷವೇ ಕಾಳಸರ್ಪ ದೋಷ. ಜಾತಕದಲ್ಲಿ ಈ ದೋಷವಿದ್ದರೆ ಸಂತಾನದಲ್ಲಿ ಸಮಸ್ಯೆ ಉಂಟಾಗುತ್ತದೆ. ಹಣಕ್ಕೆ ಸಂಬಂಧಿಸಿದ ತೊಂದರೆಗಳು ಕಾಡುತ್ತವೆ. ಜೀವನದಲ್ಲಿ ಹೆಚ್ಚಿನ ಏರು-ಪೇರುಗಳನ್ನು ಕಾಣಬೇಕಾಗಿ ಬರುತ್ತದೆ. ಇವರು ಹತ್ತಿರದ ದೇವಿ ದೇವಳದಲ್ಲಿ ಕುಂಕುಮಾರ್ಚನೆ ಮಾಡಿ. ಮನೆಯಲ್ಲಿ ಲಕ್ಷ್ಮಿದೇವಿಗೆ ಬ್ಲಾಕೇಜ್‌ ಆಗುವ ಯಾವುದೇ ಆಚರಣೆ, ಅಡೆತಡೆ ತೆಗೆದುಹಾಕಿ. ನಾಗದೇವರಿಗೆ ತಂಪುಪದಾರ್ಥ ಅರ್ಪಿಸಿ.  

ಪ್ರೇತ ದೋಷ: ಜಾತಕದಲ್ಲಿ ಒಂದನೇ ಮನೆಯಲ್ಲಿ ಚಂದ್ರನೊಂದಿಗೆ ರಾಹುವಿನ ಸಂಯೋಗವಿದ್ದರೆ ಪ್ರೇತ ದೋಷ ಬರುತ್ತದೆ. ಅಷ್ಟೇ ಅಲ್ಲದೇ ಐದನೇ ಮತ್ತು ಒಂಭತ್ತನೇ ಮನೆಯಲ್ಲಿ ಯಾವುದಾದರೂ ಕ್ರೂರ ಗ್ರಹವಿದ್ದರೆ ಅಂಥವರು ಭೂತ, ಪ್ರೇತ, ಪಿಶಾಚಿ ಅಥವಾ ಯಾವುದಾದರು ಕೆಟ್ಟ ಶಕ್ತಿಯ ಪ್ರಭಾವಕ್ಕೆ ಒಳಗಾಗುತ್ತಾರೆ. ಹೆದರಬೇಕಿಲ್ಲ. ದೀಪಾವಳಿಯ ಮೂರು ದಿನವೂ ಮಹಾವಿಷ್ಣುವಿಗೆ ತುಪ್ಪದ ದೀಪ ಹಚ್ಚಿಟ್ಟು, ವಿಷ್ಣುಸಹಸ್ರನಾಮ ಪಠಿಸಿ. 

ದೀಪಾವಳಿಯಂದು ಯಾವುದೇ ಕಾರಣಕ್ಕೂ ಈ 6 ವಸ್ತುಗಳನ್ನು ಯಾರಿಗೂ ನೀಡಬೇಡಿ; ಕೊಟ್ರೆ ದಟ್ಟ ದಾರಿದ್ರ್ಯ ನಿಮ್ಮದಾಗುತ್ತೆ 
 

ಪಿತೃ ದೋಷ: ಜಾತಕದಲ್ಲಿ ಸೂರ್ಯ, ಚಂದ್ರ, ರಾಹು ಅಥವಾ ಶನಿಗ್ರಹಗಳಲ್ಲಿ ಯಾವುದಾದರೂ ಎರಡು ಒಂದೇ ಮನೆಯಲ್ಲಿದ್ದರೆ ಪಿತೃ ದೋಷ ಉಂಟಾಗುತ್ತದೆ. ಪಿತೃ ದೋಷವಿದ್ದಾಗ ಸಂತಾನಕ್ಕೆ ಸಂಬಂಧಿಸಿದಂತೆ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಿರಿಯರ ಅಂತ್ಯ ಸಂಸ್ಕಾರ ಸರಿಯಾದ ಕ್ರಮದಲ್ಲಿ ನಡೆಯದೇ ಹೋದಾಗ ಈ ರೀತಿಯಲ್ಲಿ ಸಮಸ್ಯೆಗಳು ಎದುರಾಗುತ್ತವೆ. ದೀಪಾವಳಿಯಂದು ದೇವರಿಗೆ ದೀಪ ಹತ್ತಿಸಿಡುವ ಜೊತೆಗೆ, ಅಮಾವಾಸ್ಯೆಯ ದಿನ, ಪಿತೃಗಳಿಗೆ ಸಣ್ಣ ಪ್ರಮಾಣದಲ್ಲಾದರೂ ಸರಿಯೇ ಒಂದು ಎಡೆ ಇಡುತ್ತೇನೆಂದು ಹೇಳಿಕೊಳ್ಳಿ. ಅದನ್ನು ಆಚರಿಸಿ.
 
ಗ್ರಹಣ ದೋಷ: ಸೂರ್ಯ ಅಥವಾ ಚಂದ್ರನ ಸಂಯೋಗ ರಾಹು-ಕೇತುವಿನೊಂದಿಗಾದಾಗ ಈ ದೋಷ ಉಂಟಾಗುತ್ತದೆ. ಈ ದೋಷವಿದ್ದ ವ್ಯಕ್ತಿಗೆ ಯಾವಾಗಲೂ ಭಯ ಕಾಡುತ್ತದೆ ಮತ್ತು ಹಿಡಿದ ಕೆಲಸವನ್ನು ಅರ್ಧಂಬರ್ಧಕ್ಕೆ ಬಿಟ್ಟು ಹೊಸ ಕೆಲಸದ ಯೋಚನೆ ಮಾಡುವ ಮನಃಸ್ಥಿತಿಯನ್ನು ಹೊಂದುತ್ತಾನೆ. ದುರ್ಗಾಸಪ್ತಶತಿಯನ್ನು ಪಾರಾಯಣ ಮಾಡಿ. ಮನೆಯನ್ನು ಸ್ವಚ್ಛಗೊಳಿಸಿ ಹಾಗೂ ಕಸವನ್ನು ಹೊರಗೆ ಹಾಕಿ. 

ಹಿತಶತ್ರುಗಳ ಮಾಟ-ಮಂತ್ರದಿಂದ ಪಾರಾಗಲು ದೀಪಾವಳಿಯಂದು ಈ 4 ಕೆಲಸ ಮಾಡಿ
 

click me!