Vedha Movie: ಶಿವಣ್ಣನ ಹಿಂದಿನ ಶಕ್ತಿ ಯಾರು? ಮಡದಿ ಗೀತಾ ಹೇಳಿದ ರಹಸ್ಯ!

Jun 23, 2022, 10:29 PM IST

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ 125ನೇ ವೇದ ಸಿನಿಮಾವನ್ನು ಪತ್ನಿ ಗೀತಾ ಶಿವರಾಜ್‌ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಗೀತಾ ಪಿಕ್ಚರ್ ಬ್ಯಾನರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ಗೀತಾ ಶಿವರಾಜ್‌ಕುಮಾರ್, ಅವರ ಹಿಂದಿನ‌ ಶಕ್ತಿ ನಾನು ಅಂತ ಎಲ್ಲರೂ ಹೇಳ್ತಾರೆ, ಆದ್ರೆ ಅದು ನೀವು, ಅಪ್ಪಾಜಿ, ಅಮ್ಮ, ಅಪ್ಪು, ರಾಘಣ್ಣ, ಅವರ ತಂಗಿಯರು, ಹಾಗೂ ಅಭಿಮಾನಿ ದೇವರುಗಳು ಎಂದು ತಿಳಿಸಿದರು. ಜೊತೆಗೆ ಶಿವರಾಜ್‌ಕುಮಾರ್ ನೂರನೇ ಚಿತ್ರವನ್ನು ನಮ್ಮ ಬ್ಯಾನರ್‌ನಲ್ಲಿ ಲಾಂಚ್ ಮಾಡಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಮಾಡೋಕೆ ಆಗಿಲ್ಲ. ಹಾಗಾಗಿ ವೇದ ಚಿತ್ರದ ಮೂಲಕ ಮಾಡುತ್ತಿದ್ದೇವೆ ಎಂದು ಗೀತಾ ಶಿವರಾಜ್ ಕುಮಾರ್‌ ಈ ಸಂದರ್ಭದಲ್ಲಿ ಹೇಳಿದರು.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies