ಒಂದಿಂಚು ಕದಲದೇ ಥಿಯೇಟರ್‌ನಲ್ಲಿ ಚಾರ್ಲಿ ವೀಕ್ಷಿಸಿದ ಶ್ವಾನ

Jun 24, 2022, 3:28 PM IST

777 ಚಾರ್ಲಿ ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಎಲ್ಲಾ ಭಾಷೆಯ ಪ್ರೇಕ್ಷಕರು ಸಿನಿಮಾ ನೋಡಿ ಕೊಂಡಿದ್ದಾರೆ. ಧರ್ಮ ಮತ್ತು ಚಾರ್ಲಿಯ ಭಾವನಾತ್ಮಕ ಕಥೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಪ್ರೇಕ್ಷಕರು ಮಾತ್ರವಲ್ಲದೇ ಶ್ವಾನಗಳು ಸಹ ಸಿನಿಮ ನೋಡುತ್ತಿರುವುದು ವಿಶೇಷ. ಇತ್ತೀಚಿಗೆ ಶ್ವಾನವೊಂದು, ಸಿನಿಮಾ ಮುಗಿಯೋವರೆಗೂ ಒಂದಿಂಚು ಕದಲದೇ ನೋಡಿದೆ. ಬಳ್ಳಾರಿಯ ಡ್ಯಾನ್ಸರ್  ಸುಭಾಷ್ ಚಂದ್ರ ಜೊತೆಗೆ ಬಂದ ಶ್ವಾನಕ್ಕೆ,  ಶಿವ ಥಿಯೇಟರ್ ಅವಕಾಶ ಮಾಡಿಕೊಟ್ಟಿತ್ತು. ಬಳ್ಳಾರಿಯ ಡ್ಯಾನ್ಸರ್  ಸುಭಾಷ್ ಚಂದ್ರ ಜೊತೆಗೆ ಬಂದ ಶ್ವಾನ ಸಿನಿಮಾ ವೀಕ್ಷಿಸಿದೆ.  ತಮ್ಮ ಪ್ರೀತಿಯ ನಾಯಿ ಜೊತೆಗೆ ಸಿನಿಮಾ  ನೋಡಲು ಸುಭಾಷ್ ಗೆ  ಶಿವ ಥಿಯೇಟರ್ ಅವಕಾಶ ಮಾಡಿಕೊಟ್ಟಿತ್ತು.  ಸಿನಿಮಾ ಮುಗಿಯೋವರೆಗೂ ಸೀಟ್ ನಲ್ಲಿ ಒಂದಿಂಚು ಕದಲದೇ ಶ್ವಾನ ಸಿನಿಮಾ ನೋಡಿದೆ. ಈ ವಿಡಿಯೋ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.