Jun 3, 2022, 1:26 PM IST
ಕಾರ್ತಿಕ್ ಜಯರಾಂ (Karthik Jairam) ಜೆಕೆ ಅಂತಾನೇ ಫೇಮಸ್ ಆಗಿರೋ ಸ್ಯಾಂಡಲ್ ವುಡ್ ನ ಹ್ಯಾಂಡ್ಸಮ್ ನಟ. ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿರೋ ಜೆಕೆ ಕಳೆದ ಮೂರ್ನಾಲ್ಕು ದಿನಗಳಿಂದ ಸಖತ್ ಸುದ್ದಿಯಲ್ಲಿದ್ದಾರೆ. ಜೆಕೆ ಸುದ್ದಿ ಆಗ್ತಿರೋದು ಸಿನಿಮಾ ವಿಚಾರದಿಂದಲ್ಲ..ಮದುವೆ (Wedding) ವಿಚಾರಕ್ಕೆ!
ನಟ ಕಾರ್ತಿಕ್ ಜಯರಾಂ ಮದುವೆ ಆಗ್ತಾರಂತೆ. ಅವ್ರ ಬಹು ದಿನದ ಗೆಳೆತಿಯೊಂದಿಗೆ ಹಸೆಮಣೆ ಏರುತ್ತಾರೆ.. ಅಂತೆಲ್ಲಾ ಗಾಸಿಪ್ ಹರಿದಾಡುತ್ತಿದೆ.ಅದಕ್ಕೆ ಕಾರಣ ಜೆಕೆ ಅವ್ರ ಸ್ನೇಹಿತೆ ಅಪರ್ಣಾ ಸಮಂತಾ ಅವ್ರ ಜೊತೆ ಹಂಚಿಕೊಂಡ ಫೋಟೋ. ಜೆಕೆ ಮತ್ತು ಅವ್ರ ಸ್ನೇಹಿತೆ ಅಪರ್ಣಾ ಬ್ಯಾಕ್ ಟು ಬ್ಯಾಕ್ ಜೊತೆಯಲ್ಲಿರೋ ಫೋಟೋಗಳನ್ನ ಹಂಚಿಕೊಂಡಿದ್ರು. ಇನ್ನು ಅಪರ್ಣಾ ಅವ್ರ ಅಕೌಂಟ್ ನಲ್ಲಿಯೂ ಜೆಕೆ ಜೊತೆಗಿರೋ ಫೋಟೋಗಳು ಹೆಚ್ಚಾಗಿತ್ತು. ಅದ್ರ ಜೊತೆಗೆ ಅವ್ರು ಕೊಟ್ಟ ಕ್ಯಾಪ್ಷನ್ ನೋಡಿ ಜನ ಕನ್ಫ್ಯೂಸ್ ಮಾಡಿಕೊಂಡಿ ಬಿಟ್ಟಿದ್ದಾರೆ.
ನಟ ಕಾರ್ತಿಕ್ ಜಯರಾಂ ಮದ್ವೆ ವಿಚಾರ ಕೇಳಿ ಗರಂ ಆಗಿದ್ದಾರೆ. ಸಿಂಗಲ್ ಆಗಿಯೇ ನಾನು ಸೂಪರ್ ಗುಡ್ ಆಗಿದ್ದೇನೆ. ನನ್ನ ಮದ್ವೆ ಫಿಕ್ಸ್ ಆದ್ರೆ ನಾನೇ ಹೇಳುತ್ತೇನೆ. ನನ್ನ ವೈಯಕ್ತಿಕ ಜೀವನದ ಬಗ್ಗೆ ತಪ್ಪಾಗಿ ಬರೆಯಬೇಡಿ ಎಂದಿದ್ದಾರೆ..ಒಟ್ಟಾರೆ ಜೆಕೆ ಮದ್ವೆ ವಿಚಾರ ಎಲ್ಲೆಲ್ಲೂ ಗಾಸಿಪ್ ಆಗಿದಂತು ನಿಜ ಆದ್ರೆ ಜೆಕೆ ಮಾತ್ರ ತಾನಾಯ್ತು ತನ್ನ ಜಿಮ್ ವರ್ಕ್ಔಟ್ ಆಯ್ತು..ಅಂತ ಲೈಫ್ ಎಂಜಾಯ್ ಮಾಡ್ತಿದ್ದಾರೆ.