Challakere: ಮಗುವನ್ನು ಕಳೆದುಕೊಂಡ ತಾಯಿ ಕೋತಿಯ ಮೂಕರೋದನೆ!

Feb 10, 2022, 6:33 PM IST

ವಿದ್ಯುತ್ ಶಾಕ್‌ನಿಂದ ಮರಿ ಕೋತಿಯೊಂದು ಪ್ರಾಣ ಬಿಟ್ಟಿದ್ದು, ಅದರ ಶವದೆದುರು ರೋದಿಸುವ ತಾಯಿ ಕೋತಿಯ ವಿಡಿಯೋವೊಂದು ನೋಡಿದವರ ಮನ ಕಲಕುತ್ತಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದಲ್ಲಿ ಈ ಹೃದಯ ವಿದ್ರಾವಕ ದೃಶ್ಯ ಸೆರೆಯಾಗಿದೆ. 

ಮರಿ ಬದುಕಬಹುದೇನೋ ಎಂಬ ಆಸೆಯಿಂದ ತಾಯಿ ಕೋತಿ ಅದನ್ನು ಬದುಕಿಸಲು ಹತ್ತಿರದಲ್ಲಿದ್ದ ಸಿಂಟೆಕ್ಸ್‌ನಿಂದ ನೀರು ಹಾಕಿ ನೋಡಿದೆ. ಆದರೆ, ಅದರ ಪ್ರಯತ್ನ ವ್ಯರ್ಥ ಎಂದು ಅರಿವಾಗುತ್ತಲೇ ಮರಿಯ ದೇಹ ಎತ್ತಿಕೊಂಡು ಜಾಗ ಖಾಲಿ ಮಾಡಿದೆ. ತಾಯಿ ಕೋತಿ(Mother monkey)ಯ ಮೂಕರೋದನೆಯ ಮನಕಲಕುವ ದೃಶ್ಯ ಮೊಬೈಲ್  ಕ್ಯಾಮೆರದಲ್ಲಿ ಸೆರೆಯಾಗಿದ್ದು, ಸಂಕಷ್ಟದಲ್ಲಿದ್ದ ಕೋತಿಗೆ ಮತ್ತೊಂದು ಕೋತಿ ಸಮಾಧಾನ ಹೇಳಲು ಬಂದಿದೆ. 

Chest Pain and Gastric: ಎದೆಯುರಿ ಉಪಶಮನಕ್ಕೆ ಸಿಂಪಲ್ ಟಿಪ್ಸ್ ಇಲ್ಲಿವೆ

ತನ್ನ ಕಂದನ  ಮೃತ ದೇಹ ಹಿಡಿದು ತಾಯಿ ಕೋತಿ ಕಂಬನಿ ಮಿಡಿಯುತ್ತಿರುವ ದೃಶ್ಯ, ಸಂಬಂಧಗಳು ಮನುಷ್ಯರಿಗೂ ಪ್ರಾಣಿಗೂ ಒಂದೇ ಎಂಬುದನ್ನು ತೋರಿಸುತ್ತಿದೆ.