ಕರ್ನಾಟಕದಲ್ಲಿ ಪ್ಯಾಲೆಸ್ತೀನ್ ಪ್ರೀತಿಗೆ ಕಾಂಗ್ರೆಸ್ಸೇ ಕಾರಣ: ರೇಣುಕಾಚಾರ್ಯ

Published : Sep 18, 2024, 06:00 AM IST
ಕರ್ನಾಟಕದಲ್ಲಿ ಪ್ಯಾಲೆಸ್ತೀನ್ ಪ್ರೀತಿಗೆ ಕಾಂಗ್ರೆಸ್ಸೇ ಕಾರಣ: ರೇಣುಕಾಚಾರ್ಯ

ಸಾರಾಂಶ

ರಾಜ್ಯದಲ್ಲಿ ಈದ್ ಮಿಲಾದ್ ಆಚರಣೆಯಲ್ಲಿ ಪ್ಯಾಲೇಸ್ತೀನ್ ಧ್ವಜ ಹಿಡಿದಿದ್ದು, ಸ್ಟಿಕ್ಕರ್ ಅಂಟಿಸಿಕೊಂಡಿದ್ದು, ಪ್ಯಾಲೇಸ್ತೀನ್‌ ಪರ ಘೋಷಣೆ ಕೂಗಿದ ಪ್ರಕರಣಗಳು ವರದಿಯಾಗಿವೆ. ಇದಕ್ಕೆ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್‌ ನಾಯಕರೇ ಕಾರಣ ಎಂದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ   

ದಾವಣಗೆರೆ(ಸೆ.18): ಈದ್ ಮಿಲಾದ್ ಹಬ್ಬದ ವೇ‍ಳೆ ರಾಜ್ಯದಲ್ಲಿ ಪ್ಯಾಲೇಸ್ತೀನ್ ಧ್ವಜ ಹಿಡಿದು, ಸ್ಟಿಕರ್ ಹಾಕಿಕೊಂಡು, ಘೋಷಣೆ ಕೂಗಿರುವುದಕ್ಕೆ ರಾಜ್ಯ ಸರ್ಕಾರ ಹಾಗೂ ದೇಶ ಮತ್ತು ರಾಜ್ಯದ ಕಾಂಗ್ರೆಸ್‌ ನಾಯಕರೇ ಕಾರಣ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದರು.

ಹೊನ್ನಾಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈದ್ ಮಿಲಾದ್ ಆಚರಣೆಯಲ್ಲಿ ಪ್ಯಾಲೇಸ್ತೀನ್ ಧ್ವಜ ಹಿಡಿದಿದ್ದು, ಸ್ಟಿಕ್ಕರ್ ಅಂಟಿಸಿಕೊಂಡಿದ್ದು, ಪ್ಯಾಲೇಸ್ತೀನ್‌ ಪರ ಘೋಷಣೆ ಕೂಗಿದ ಪ್ರಕರಣಗಳು ವರದಿಯಾಗಿವೆ. ಇದಕ್ಕೆ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್‌ ನಾಯಕರೇ ಕಾರಣ ಎಂದರು.

ರೈತರು, ಯೋಧರು ನಮ್ಮ ಕಣ್ಣುಗಳಿದ್ದಂತೆ: ಮಾಜಿ ಸಚಿವ ರೇಣುಕಾಚಾರ್ಯ

ರಾಜ್ಯದಲ್ಲಿ ಅಶಾಂತಿ ಸೃಷ್ಠಿ:

ಕರ್ನಾಟಕದಲ್ಲಿ ಕಳೆದ ವರ್ಷ ರಾಜ್ಯಕ್ಕೆ ಅಪಮಾನಿಸುವ ಕೆಲಸವಾಯಿತು. ಕರಗೊಂಡನಹಳ್ಳಿ ಹನುಮಧ್ವಜ ವಿಚಾರದಲ್ಲಿ ಹಿಂದು ಸಂಘಟನೆಯವರ ಮೇಲೆಯೇ ಲಾಠಿ ಚಾರ್ಜ್ ಮಾಡಿ, ಕೇಸ್ ದಾಖಲಿಸಲಾಯಿತು. ನಾಗಮಂಗಲದಲ್ಲಿ ಶಾಂತಿಯುತ ಗಣೇಶ ವಿಸರ್ಜನೆ ಮೆರವಣಿಗೆ ನಡೆಯುತ್ತಿತ್ತು. ಕೇರಳ ಮೂಲಕ ನಿಷೇಧಿತ ಸಂಘಟನೆಯವರು ಕಲ್ಲು, ಪೆಟ್ರೋಲ್‌ ಬಾಂಬ್‌ ಎಸೆದರು. ಮಸೀದಿಯಿಂದ ಕಲ್ಲೆಸೆದು, ಅಲ್ಲಿಯೂ ಅಶಾಂತಿ ಸೃಷ್ಟಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಗೃಹ ಸಚಿವ ಡಾ. ಜಿ.ಎಂ. ಪರಮೇಶ್ವರ ಇದೊಂದು ಸಣ್ಣ ಘಟನೆಯೆಂದು ಹೇಳಿ, ಯಾವುದೇ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿಲ್ಲ. ಒಂದಿಷ್ಟಾದರೂ ನಾಚಿಕೆಯಿದ್ದರೆ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ತಾಕೀತು ಮಾಡಿದರು.

ಹಿಂದೂಗಳ ಮೇಲೆ ದೌರ್ಜನ್ಯ ಎಸಗೋರಿಗೆ ಗುಂಡಿಡಬೇಕು: ರೇಣುಕಾಚಾರ್ಯ

ದಾವಣಗೆರೆಯಲ್ಲೂ ಕೇಸರಿ ಧ್ವಜ ಕಟ್ಟಿದ ವೇಳೆ ಕೇಸ್ ಮಾಡಿ, ಧ್ವಜ ತೆರವು ಮಾಡಿಸಿದ್ದಾರೆ. ಈಗ ಹಸಿರು ಧ್ವಜ ಕಟ್ಟಿದ್ದನ್ನು ವೈಭವೀಕರಿಸಲು ಮುಂದಾಗಿದ್ದಾರೆ. ಜಿಲ್ಲಾಡಳಿತಕ್ಕೆ ನಾಚಿಕೆಯಾಗಲ್ವಾ? ಪೊಲೀಸ್ ಇಲಾಖೆಯವರು ಕಾಂಗ್ರೆಸ್ ಪಕ್ಷದವರ ಗುಲಾಮರಾಗಿ, ಕಾಂಗ್ರೆಸ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದೀರಾ? ಬಂಟ್ವಾಳದಲ್ಲೊಬ್ಬ ರಾಜಾರೋಷವಾಗಿ ಸವಾಲು ಹಾಕುತ್ತಾನೆ. ನೀವು ಇರುವುದು ಪಾಕಿಸ್ತಾನ, ಬಾಂಗ್ಲಾ ಅಥವಾ ಪ್ಯಾಲೇಸ್ತೀನ್‌ನಲ್ಲೇ ಅಲ್ಲ. ಭಾರತ ಮಾತೆಯ ಮಡಿಲಲ್ಲಿ ನೀವಿದ್ದೀರಿ ಎಂಬುದನ್ನು ಮರೆಯಬೇಡಿ ಎಂದರು.

ಮುನಿರತ್ನ ಬಂಧನ ರಾಜಕೀಯ ದ್ವೇಷವಷ್ಟೇ

ದಾವಣಗೆರೆ: ತಿರುಪತಿಗೆ ದೇವರ ದರ್ಶನಕ್ಕೆ ಹೊರಟಿದ್ದ ಶಾಸಕ ಮುನಿರತ್ನಗೆ ಅಲ್ಲಿಗೆ ಹೋಗಿ ಬಂಧನ ಮಾಡಿದ್ದು, ರಾಜಕೀಯ ದ್ವೇಷದಿಂದಷ್ಟೇ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೊನ್ನಾಳಿಯಲ್ಲಿ ಆರೋಪಿಸಿದರು.
ಹೊನ್ನಾಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಮುನಿರತ್ನ ವಿರುದ್ಧ ದೂರು ಕೊಟ್ಟ ನಂತರ ಅದು ಸರಿಯೋ, ತಪ್ಪಾ ಎಂಬುದನ್ನು ಪರಿಶೀಲಿಸಬೇಕಿತ್ತು. ಆನಂತರ ಬಂಧನ ಮಾಡಬೇಕಿತ್ತು. ವಿದೇಶಗಳಿಗೆ ಹೋಗಿ ಭಾರತವನ್ನು ಅವಮಾನಿಸುವ ರಾಹುಲ್ ಗಾಂಧಿ ಒಬ್ಬ ಬಚ್ಚಾ, ಪಪ್ಪು. ಸ್ವತಃ ಕಾಂಗ್ರೆಸ್‌ ಪಕ್ಷದವರೇ ರಾಹುಲ್‌ ನೋಡಿ ನಗುತ್ತಾರೆ ಎಂದು ರೇಣುಕಾಚಾರ್ಯ ಹೇಳಿದರು.

PREV
Read more Articles on
click me!

Recommended Stories

ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು
ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 15 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!