
ಮೈಸೂರು(ಸೆ.18): ಅತ್ತೆ ಮಗಳು ಪ್ರೀತಿಸಿ ಕೈಕೊಟ್ಟ ಹಿನ್ನೆಲೆಯಲ್ಲಿ ಬೇಸತ್ತ ಭಗ್ನಪ್ರೇಮಿ ಡೆತ್ ನೋಟ್ ಬರೆದು ನಾಪತ್ತೆಯಾಗಿದ್ದಾನೆ. ಲಿಂಗಾಂಬುದಿ ಪಾಳ್ಯದ ಸಿದ್ದರಾಮಯ್ಯ ನಗರದ ನಿವಾಸಿ ಮಹದೇವು ಎಂವರ ಪುತ್ರ ರವಿ (26) ನಾಪತ್ತೆಯಾದವರು.
ನನ್ನ ಸೋದರಿಯ ಪುತ್ರಿ, ನನ್ನ ಪುತ್ರ ರವಿ ಅವರನ್ನು ಪ್ರೀತಿಸುತ್ತಿದ್ದು, ಸೆ. 10 ರಂದು ಮಗ ರವಿ ಮನೆ ಬಿಟ್ಟು ತೆರಳಿದ್ದು, ಹಿಂದಿರುಗಿ ಬಂದಿಲ್ಲ. ಬಳಿಕ ಮನೆಯಲ್ಲಿ ರವಿ ಕೋಣೆಯನ್ನು ಪರಿಶೀಲಿಸಿದಾಗ ಡೆತ್ ನೋಟ್ ಸಿಕ್ಕಿದೆ. ಅದರಲ್ಲಿ ಆತ ನಾನು ಪ್ರೀತಿಸುತ್ತಿದ್ದ ಅತ್ತೆಯ ಮಗಳು ನಾನು ಪ್ರೀತಿಸಿಲ್ಲ ಅಂತ ಹೇಳಿ ನಮ್ಮ ಮನೆಯ ನೆಮ್ಮದಿ ಹಾಳು ಮಾಡಿದ್ದಾರೆ, ಯಾರು ನನ್ನ ಹುಡುಕಬೇಡಿ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ನಲ್ಲಿ ಬರೆದಿಟ್ಟಿರುವುದಾಗಿ ರವಿ ಅವರ ತಂದೆ ಮಹದೇವು ದೂರಿನಲ್ಲಿ ತಿಳಿಸಿದ್ದಾರೆ.
ಕತ್ತು ಸೀಳಿ ಕೊಂದು, ರುಂಡದ ಜೊತೆ ಊರೂರು ಸುತ್ತಾಡುತ್ತಿದ್ದ; ಚೀಲದಿಂದ ರಕ್ತ ತೊಟ್ಟಿಕ್ಕುತ್ತಿತ್ತು!
ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ