Five State Election : ಉತ್ತರದ ಕುರುಕ್ಷೇತ್ರಕ್ಕೆ ಯೋಗಿಯ ಅಧಿಕೃತ ಎಂಟ್ರಿ, ಏನಾಗಲಿದೆ ಪಂಜಾಬ್ ಫೈಟ್?

Feb 5, 2022, 7:58 PM IST

ಬೆಂಗಳೂರು (ಫೆ.5): ಉತ್ತರಪ್ರದೇಶ ಸೇರಿದಂತೆ ಪಂಚರಾಜ್ಯಗಳ ಚುನಾವಣೆಯ (Five State Election) ಮೊದಲ ಹಂತಕ್ಕೆ ಇನ್ನು ಕೆಲವೇ ದಿನಗಳಿವೆ. ಈಗಾಗಲೇ ವಿವಿಧ ರಾಜಕೀಯ ಪಕ್ಷಗಳ ನಾಯಕರು ನಾಮಪತ್ರ ಸಲ್ಲಿಕೆ ಆರಂಭಿಸಿದ್ದು, ಉತ್ತರ ಪ್ರದೇಶದ (Uttar Pradesh)ಮುಖ್ಯಮಂತ್ರಿ (Chief Minister) ಯೋಗಿ ಆದಿತ್ಯನಾಥ್ (Yogi Adityanath) ಗೋರಖ್ ಪುರ (Gorakhpur) ಕ್ಷೇತ್ರದಿಂದ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇದೇ ಮೊದಲ ಬಾರಿಗೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಯೋಗಿ ಆದಿತ್ಯನಾಥ್ ಕಣಕ್ಕಿಳಿದಿದ್ದು, ಜನ ಕೈಹಿಡಿಯಲಿದ್ದಾರೆ ಎನ್ನುವ ಅಚಲ ವಿಶ್ವಾಸದಲ್ಲಿದ್ದಾರೆ.

Yogi Adityanath : ಗೋರಖ್ ಪುರದಿಂದ ನಾಮಪತ್ರ ಸಲ್ಲಿಸಿದ ಯೋಗಿ, ಮುಖ್ಯಮಂತ್ರಿಯ ಆದಾಯದಲ್ಲಿ ಗಣನೀಯ ಇಳಿಕೆ!
ಇನ್ನೊಂದೆಡೆ ಉತ್ತರ ಪ್ರದೇಶದ ರಾಜಕಾರಣದಲ್ಲಿ "ಬೆಹನ್" ಎಂದೇ ಗುರುತಿಸಿಕೊಂಡಿರುವ ಬಹುಜನ ಸಮಾಜ ಪಕ್ಷದ (Bahujan Samaj Party) ಮಾಯಾವತಿ ಸೈಲೆಂಟ್ ಆಗಿರುವ ಲಾಭ ಯಾರಿಗೆ ಆಗಲಿದೆ ಎನ್ನುವ ಕುತೂಹಲ ಎಲ್ಲರಲ್ಲಿದೆ. ಇದರ ನಡುವೆ ಪಂಜಾಬ್ ವಿಧಾನಸಭಾ ಚುನಾವಣಾ ಕಣದಲ್ಲಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರ ಸೋದರಳಿಯ ಭೂಪೇಂದ್ರ ಸಿಂಗ್ ಹನಿಯನ್ನು ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಬಂಧನ ಮಾಡಿರುವುದು ಅವರಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.