Apr 21, 2023, 1:54 PM IST
ಅವನ್ಯಾರು, ಇವನ್ಯಾರು ಅನ್ನೋ ಡೈಲಾಗ್ ಕಡಿಮೆ ಮಾಡಿದ್ರೆ ಒಳ್ಳೇದು ಎಂದು ಸೋಮಣ್ಣ ಹೇಳಿದರು. ಮಾಧ್ಯಮದ ಜತೆ ಮಾತನಾಡಿದ ಅವರು ಸಿದ್ದರಾಮಯ್ಯನವರಿಗೆ 2006ರಲ್ಲಿ ಕೆಲಸ ಮಾಡುವಾಗ ನಾನು ಒದೆ ತಿಂದಿದ್ದೆ, ಮತಯಾಚನೆ ಮಾಡಲು ಹೋದಾಗ ಅಲ್ಲಿ ಅನ್ಯ ಪಕ್ಷಗಳ ಕಾರ್ಯಕರ್ತರು ನನ್ನ ಮೇಲೆ ದಾಳಿ ನಡೆಸಿದ್ದರು. ನನ್ನ ಕಾರಿಗೆ ಕಲ್ಲು ಹೊಡೆದಿದ್ದರು. ಆಗ, ನನ್ನ ಕಾರಿನ ಗಾಜು ಜಖಂ ಆಗಿತ್ತು. ಎಂದು ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾದ ವಿ. ಸೋಮಣ್ಣ ಅವರು ಹೇಳಿದ್ದಾರೆ.ಅದಲ್ಲದೆ ಸಿದ್ದರಾಮಯ್ಯ ಈಗ ವಿರೋಧ ಪಕ್ಷದ ನಾಯಕರೂ ಅಲ್ಲ, ನಾನು ಮಂತ್ರಿನೂ ಅಲ್ಲ. ನಾನೂ ಅಭ್ಯರ್ಥಿ , ಅವರೂ ಅಭ್ಯರ್ಥಿ ಅಷ್ಟೆ. ನಾನು ಅವರನ್ನು ಇಂದಿಗೂ ಗೌರವದಿಂದ ‘ಸಾಹೇಬರೇ’ ಅಂತ ಕರೆಯುತ್ತೇನೆ. ಆದರೆ, ಅವರನ್ನು ನನ್ನನ್ನು ಏಕವಚನದಲ್ಲಿ ಸಂಬೋಧಿಸುತ್ತಾರೆ ಎಂದು ಸೋಮಣ್ಣ ನೋವಿನಿಂದ ನುಡಿದರು.