Jul 23, 2022, 1:28 PM IST
ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದೆ ಅಂದ್ರೆ, ಪಕ್ಷ ಪಕ್ಷಗಳ ನಡುವೆ ಪೈಪೋಟಿ ಇರೋದು ಕಾಮನ್. ಆದ್ರೆ, ಒಂದೇ ಪಕ್ಷದಲ್ಲಿ ನಾನ್ ಸಿಮಂ ಆಗ್ಬೇಕು, ನಾನೇ ಸಿಎಂ ಆಗ್ಬೇಕು ಅನ್ನೋ ಹಠ ಹುಟ್ಟಿಕೊಳ್ಳೋದಿದೆಯಲ್ಲ, ಅದು ನಿಜಕ್ಕೂ ಅಚ್ಚರಿ ಹುಟ್ಟಿಸುತ್ತೆ. ಈಗ ಕಾಂಗ್ರೆಸ್ ಪಕ್ಷದಲ್ಲಿ ಆಗ್ತಾ ಇರೋದೂ ಅದೇ ಕತೆ. ಅಹಿಂದ ನಾಯಕ ಸಿದ್ದರಾಮಯ್ಯ (Siddaramaiah) ಮುಂದಿನ ಸಿಎಂ ಎಂದು ಒಂದು ಬಣ ಹೇಳಿದರೆ, ಇನ್ನೊಂದು ಬಣ ಡಿಕೆ ಸಾಹೇಬ್ರು ಸಿಎಂ ಅಂತಿದ್ದಾರೆ.
ವಿಜಯೇಂದ್ರಗೆ ಶಿಕಾರಿಪುರ: ಯಡಿಯೂರಪ್ಪ ಕ್ಷೇತ್ರತ್ಯಾಗದ ಗುಟ್ಟೇನು..?
ಡಿಕೆ ಶಿವಕುಮಾರ್ (DK Shivakumar) ಕಾಂಗ್ರೆಸ್ ಪಕ್ಷದ ರಾಜಾಧ್ಯಕ್ಷ. ಸದ್ಯಕ್ಕೆ ರಾಜ್ಯ ಕಾಂಗ್ರೆಸ್ ಪಕ್ಷದ ಡೈನಾಮಿಕ್ ದೊರೆ. ಪಕ್ಷವನ್ನು ಹುಮ್ಮಸ್ಸಿನಿಂದ ಮುನ್ನಡೆಸಿಕೊಂಡು ಹೋಗುತ್ತಿರುವ ಅತ್ಯಂತ ಪ್ರಬಲ ನಾಯಕ. ಇದರ ಬೆನ್ನಲ್ಲೇ ಇದೀಗ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಲಿಂಗಾಯತ ಮುಖಂಡ ಎಂ.ಬಿ.ಪಾಟೀಲ್ ಕೂಡ ಪರೋಕ್ಷವಾಗಿ ಮುಖ್ಯಮಂತ್ರಿ ಹುದ್ದೆಗೆ ದಾಳ ಎಸೆದಿದ್ದಾರೆ. ಸಿಎಂ ಹುದ್ದೆಗೆ ಬೇರೆ ನಾಯಕರು ಪೈಪೋಟಿ ನಡೆಸುವಾಗ ನನ್ನ ಹೆಸರು ಬರಬೇಕಿಲ್ಲ. ನಾವು ಬರಬೇಕಾದಾಗ ನೇರವಾಗಿ ಬರುತ್ತೇವೆ. ನಾವೇನು ಸೆಕೆಂಡ್ ಕ್ಲಾಸ್ ಸಿಟಿಜನ್ ಅಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.