ಬಡವರ ಪಾಲಿಗೆ ಅನ್ನದಾತ, ಕರುನಾಡ ಪಾಲಿಗೆ ಭಾಗ್ಯವಿದಾತ: ಸಿದ್ದರಾಮಯ್ಯ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದೇ ರೋಚಕ..!

May 20, 2023, 4:46 PM IST

ಮೈಸೂರು ಬಳಿಕ ಸಿದ್ದರಾಮನಹುಂಡಿಯಲ್ಲಿ ಹುಟ್ಟಿರುವ ಸಿಎಂ ಸಿದ್ದರಾಮಯ್ಯ ಅವರು ಅಹಿಂದ ಹೋರಾಟದ ಮೂಲಕ ಹಿಂದೂಳಿದವರಿಗೆ ಧ್ವನಿಯಾಗಿದ್ದಾರೆ. ಇವರು ಶಾರದ ವಿಲಾಸ ಕಾಲೇಜಿನಲ್ಲಿ ಎಲ್‌ಎಲ್‌ಬಿ ಮುಗಿಸಿದರು. ಬಳಿಕ ನಂಡುಸ್ವಾಮಿ ಅವರ ಸಹಾಯದಿಂದ ರಾಜಕೀಯಕ್ಕೆ ಬಂದರು. 1994ರಲ್ಲಿ ರಾಜ್ಯ ಹಣಕಾಸು ಸಚಿವರಾಗಿ, ಮೊದಲ ಬಜೆಟ್‌ ಮಂಡಿಸಿದರು.  2013 ರ ಚುನಾವಣೆಯಲ್ಲಿ ಗೆದ್ದು ಸಿಎಂ ಆಗಿದ್ದರು. ಈ ವೇಳೆ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದರು. ಅಲ್ಲದೇ ಅಕ್ರಮ ಗಣಿಗಾರಿಕೆ ವಿರುದ್ಧ ವಿಧಾನಸೌಧದಲ್ಲಿ ಅಬ್ಬರಿಸಿದ್ದರು. ಜೊತೆಗೆ 17 ದಿನ 320 ಕಿ.ಮೀ ಪಾದಯಾತ್ರೆಯನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದರು.

ಇದನ್ನೂ ವೀಕ್ಷಿಸಿ: 5 ಗ್ಯಾರಂಟಿಗಳನ್ನು ಇಂದೇ ಜಾರಿಗೆ ತರುತ್ತೇವೆ: ನೂತನ ಸಿಎಂ ಘೋಷಣೆ