ಕಾಂಗ್ರೆಸ್‌ಗೆ ಪಾರ್ಟಿಗೆ ಈಶ್ವರಪ್ಪನವರ ರಾಜೀನಾಮೆ ಬೇಕಿಲ್ಲ, ಬೇರೆ ಬೇಡಿಕೆ ಇಟ್ಟ ಡಿಕೆಶಿ

Apr 15, 2022, 2:12 PM IST

ಬೆಂಗಳೂರು, (ಏ.15): ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್.ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದು, ಇಂದು(ಶುಕ್ರವಾರ) ಸಿಎಂ ಬೊಮ್ಮಾಯಿ ಅವರಿಗೆ ರಾಜೀನಾಮೆ ಪತ್ರ ನೀಡಲಿದ್ದಾರೆ.

Santosh Patil Suicide Case: ಈಶ್ವರಪ್ಪ ರಾಜೀನಾಮೆ: ಕಾಂಗ್ರೆಸ್‌-ಬಿಜೆಪಿ ಮುಂದಿನ ನಡೆ ಏನು?

ಆದ್ರೆ, ಕಾಂಗ್ರೆಸ್ ತನ್ನ ಬಿಜೆಪಿ ಹಾಗೂ ಈಶ್ವರಪ್ಪನವರ ವಿರುದ್ಧ ಹೋರಾಟ ಮುಂದುವರೆಸಲು ತೀರ್ಮಾನಿಸಿದೆ. ಈಶ್ವರಪ್ಪ ರಾಜೀನಾಮೆ ಬೇಕಿಲ್ಲ. ಅವರ ಬಂಧನವಾಗಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ.