ಬಿಗ್‌ಬಾಸ್‌ ನರಕ-ಸ್ವರ್ಗದಲ್ಲಿ ನಾಮಿನೇಷನ್‌ ಕಿಚ್ಚು, ಚರ್ಚೆ ಸೋತು ಮಸಿ ಹಚ್ಚಿಸಿಕೊಂಡವರು ಇವರೇ ನೋಡಿ!

First Published | Oct 7, 2024, 11:27 PM IST

ಬಿಗ್‌ಬಾಸ್‌ ಕನ್ನಡ ಸೀಸನ್‌ 11 ರ ಎರಡನೇ ವಾರದ ನಾಮಿನೇಷನ್‌ ಪ್ರಕ್ರಿಯೆಯಲ್ಲಿ ನಾಲ್ವರು ಸ್ಪರ್ಧಿಗಳು ನಾಮಿನೇಟ್‌ ಆಗಿದ್ದಾರೆ. ಚೈತ್ರಾ ಕುಂದಾಪುರ ಅವರ  ಮಾತು ನರಕವಾಸಿಗಳ ಕೋಪಕ್ಕೆ ಕಾರಣವಾಯಿತು. ಮಂಜು ಮತ್ತು ಧನ್‌ರಾಜ್‌ ನಡುವಿನ ಚರ್ಚೆ ಕೂಡ ಗಮನ ಸೆಳೆಯಿತು.

 ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಎರಡನೇ ವಾರಕ್ಕೆ ಕಾಲಿಟ್ಟಿದೆ. ಈ ವಾರದ ನಾಮಿನೇಶ್‌ ನಲ್ಲಿ ಒಟ್ಟು ಎಷ್ಟು  ಮಂದಿ ನಾಮಿನೇಟ್‌ ಆಗಲಿದ್ದಾರೆಂದು ಕಾದು ನೋಡಬೇಕಿದೆ. ಕ್ಯಾಪ್ಟನ್‌ ಹಂಸ ಅವರು ಗೋಲ್ಡ್‌ ಸುರೇಶ್‌ ಅವರನ್ನು ನೇರವಾಗಿ ನಾಮಿನೇಟ್‌ ಮಾಡಿದ್ದಾರೆ. ಸ್ವರ್ಗದಿಂದ ತ್ರಿವಿಕ್ರಮ್, ಧನ್‌ರಾಜ್‌ ನರಕದಿಂದ ಅನುಷಾ ರೈ, ಮತ್ತು ಸುರೇಶ್ ಅವರು ಎರಡನೇ ವಾರಕ್ಕೆ ಮೊದಲ ಎಪಿಸೋಡ್‌ ನಲ್ಲಿ ನಾಮಿನೇಟ್‌ ಆಗಿದ್ದಾರೆ.

ನಾಮಿನೇಟ್‌ ಮಾಡಲು ಬಿಗ್‌ಬಾಸ್‌ ಒಂದು ಟಾಸ್ಕ್ ನೀಡಿದ್ದರು. ಇಬ್ಬರು ನಿಂತು ನಾವ್ಯಾಕೆ ಶ್ರೇಷ್ಠ ಎಂದು ಚರ್ಚಿಸಬೇಕಿತ್ತು. ಇಬ್ಬರು ಸ್ಪರ್ಧಿಗಳ ಚರ್ಚೆಯನ್ನು ಗಮನಿಸಿ ಮನೆಯ ಕ್ಯಾಪ್ಟನ್‌ ಹಂಸ ಅವರು ಯಾರು ನಾಮಿನೇಟ್‌ ಆಗಬೇಕೆಂದು ಮಸಿ ಬಳಿಯಬೇಕಿತ್ತು. ಮೊದಲನೇ ಸುತ್ತಿನಲ್ಲಿ ಸ್ವರ್ಗ ನಿವಾಸಿಗಳಾದ ಉಗ್ರಂ ಮಂಜು ಮತ್ತು ತ್ರಿವಿಕ್ರಮ್‌ ನಡುವೆ ಚರ್ಚೆಗೆ ಬಿಗ್‌ಬಾಸ್‌ ಆಯ್ಕೆ ಮಾಡಿದರು. ಈ ಚರ್ಚೆಯಲ್ಲಿ ತ್ರಿವಿಕ್ರಮ್ ಅವರನ್ನು  ಹಂಸ ನಾಮಿನೇಟ್‌ ಮಾಡಿದರು. ಈ ಚರ್ಚೆ ಬಳಿಕ ಮಂಜು ತ್ರಿವಿಕ್ರಮ್ ನಾಮಿನೇಟ್‌ ಬಳಿಕ ಬೇಸರವಾದರು.

Latest Videos


ಎರಡನೇ ಸುತ್ತಿನಲ್ಲಿ ನರಕ ನಿವಾಸಿಗಳಿಂದ ಅನುಷಾ ರೈ ಮತ್ತು ಚೈತ್ರಾ ಕುಂದಾಪುರ ಅವರನ್ನು ಚರ್ಚೆಗೆ ಬಿಗ್‌ಬಾಸ್ ಕರೆದರು. ಚರ್ಚೆ ಮಧ್ಯೆ ಅನುಷಾ ಮಾತು ಮಗಿಸುವ ಮೊದಲೇ ಚೈತ್ರಾ ಕುಂದಾಪುರ ಮಧ್ಯೆ ಬಂದರು.  ಚೈತ್ರಾ ಮಾತನಾಡುತ್ತಾ ನರಕವಾಸಿಗಳು ಸ್ವರ್ಗದ ಮನೆಯಿಂದ ಕಂಬಿ ಹಾರಿ ಹೋಗಿ ಕದ್ದು ತಿನ್ನುವ ಪ್ಲಾನ್‌ಗಳೆಲ್ಲ ಹೊರಗೆ ಬಂತು. ಇದಕ್ಕೆ ನರಕವಾಸಿಗಳು ಚೈತ್ರಾ ಮೇಲೆ ಸಿಟ್ಟಿಗೆದ್ದರು. ಟೀಂನಲ್ಲಿ ಮಾಡಿರುವ ಯೋಜನೆಗಳನ್ನು ನಾಮಿನೇಷನ್‌ ನಲ್ಲಿ ಹೇಳಿದ್ದಕ್ಕೆ ಸಿಟ್ಟಿಗೆದ್ದರು. ಇದಕ್ಕೆ ಸ್ವರ್ಗ ನಿವಾಸಿ ಮಂಜು ಚೈತ್ರಾಗೆ ಅರ್ಥ ಮಾಡಿಸಿದರು. ಕೊನೆಗೆ ಅನುಷಾ ರೈ ಅವರನ್ನು ಹಂಸ ಅವರು ನಾಮಿನೇಟ್‌ ಮಾಡಿದರು. 

ಮೂರನೇ ಸುತ್ತಿನಲ್ಲಿ ಸ್ವರ್ಗ ನಿವಾಸದಿಂದ ಧನ್‌ರಾಜ್ ಮತ್ತು ಧರ್ಮ ಕೀರ್ತಿರಾಜ್‌ ಅವರನ್ನು ಬಿಗ್‌ಬಾಸ್‌ ಚರ್ಚೆಗೆ ಕರೆದರು. ಕಾಮಿಡಿ ನನಗೆ ಸ್ಟ್ರೆಂತ್ ಎಂದು ಎಂದರು,  ಇದರಲ್ಲಿ ಧನ್‌ರಾಜ್‌ ಮತ್ತು ಮಂಜು ಮಧ್ಯೆ ಚರ್ಚೆಯಾಯ್ತು. ನೀವು ಟಾಸ್ಕ್‌ ಮಾಡಲು  ಮುಂದೆ ಬರೋದಿಲ್ಲ ಯಾಕೆ ಎಂದರು. ಇದಕ್ಕೆ ಧನ್‌ರಾಜ್‌ ಅವರು ನೀವು ನನ್ನನ್ನು ಗಮನಿಸಿಲ್ಲ ಲೆಕ್ಕಕ್ಕೇ ಇಟ್ಟಿಲ್ಲ ಎಂದು ಮಂಜುಗೆ ಉತ್ತರ ಕೊಟ್ಟರು. ಕೊನೆಗೆ ಹಂಸ ಧನ್‌ರಾಜ್ ಅವರನ್ನು ನಾಮಿನೇಟ್‌ ಮಾಡಿದರು. ನಾಳೆ ಮತ್ತೆ ನಾಮಿನೇಷನ್‌ ಮುಂದುವರೆಯಲಿದೆ.

ನಾಳಿನ ಸಂಚಿಕೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಮುಂದುವರೆಯಲಿದ್ದು, ಯಾರ ಯಾರ ಮಧ್ಯೆ ಚರ್ಚೆ ನಡೆಯಲಿದೆ. ಯಾರು ನಾಮಿನೇಟ್‌ ಆಗಲಿದ್ದಾರೆ. ಸ್ವರ್ಗದಿಂದ ನಾಮಿನೇಟ್‌  ಆಗೋದ್ಯಾರು ಮತ್ತು ನರಕದಿಂದ ಆಗೋದ್ಯಾರು ಎಂಬುದನ್ನು ನಾಳಿನ ಸಂಚಿಕೆಯಲ್ಲಿ ತಿಳಿಯಬೇಕು.

click me!