Party Rounds: ಅಖಾಡವನ್ನೇ ಬದಲಿಸಬಲ್ಲ MAY ಪ್ರಚಾರಕ್ಕೆ ಮಹೂರ್ತ ಫಿಕ್ಸ್‌!

Apr 25, 2023, 9:04 PM IST

ಬೆಂಗಳೂರು (ಏ.25): ರಾಜ್ಯ ವಿಧಾನಸಭೆ ಚುನಾವಣೆಗೆ ನರೇಂದ್ರ ಮೋದಿ ಪ್ರಚಾರ ಸಭೆ ಅಖಾಡವನ್ನೇ ಬದಲಿಸಲಿದೆ. ನರೇಂದ್ರ ಮೋದಿ ಅಲ್ಲದೆ, ಉತ್ತರ ಪ್ರದೇಶ ಸಿಎಂ ಕೂಡ ರಾಜ್ಯದಲ್ಲಿ ಪ್ರಚಾರ ನಡೆಸಲಿದ್ದಾರೆ. ಅದರಲ್ಲೂ ಹಿಂದುತ್ವದ  ಅಖಾಡವಾಗಿರುವ ಕರಾವಳಿ ಭಾಗದ ಪುತ್ತೂರು, ಭಟ್ಕಳ, ಕಾರ್ಕಳ ಮತ್ತು ಬೈಂದೂರಿನಲ್ಲಿ ಯೋಗಿ ಸಮಾವೇಶ ನಡೆಯಲಿದೆ. ಮೋದಿ ರಾಜ್ಯದಲ್ಲಿ 6 ದಿನ ಇರಲಿದ್ದು, 20 ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಅಮಿತ್‌ ಶಾ 10 ದಿನ ಇದ್ದರೆ,  ಯೋಗಿ ಆದಿತ್ಯನಾಥ್‌ ಮೂರು ದಿನ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

Party Rounds: ಏಷ್ಯಾನೆಟ್‌ ಸುವರ್ಣನ್ಯೂಸ್‌ ಜೊತೆ ಅಮಿತ್‌ ಶಾ ಎಕ್ಸ್‌ಕ್ಲೂಸಿವ್‌ ಸಂದರ್ಶನ!