Oct 12, 2023, 2:41 PM IST
ಕೈಯಲ್ಲೊಂದು ಪೋಸ್ಟರ್.. ಆ ಪೋಸ್ಟರ್'ನ ಒಂದು ಬದಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಫೋಟೋ, ಮತ್ತೊಂದು ತುದಿಯಲ್ಲಿ ಡಿಕೆ ಬ್ರದರ್ ಡಿಕೆ ಸುರೇಶ್ ಫೋಟೋ.. ನಂದೇನಿದ್ರೂ ಇವ್ರಿಬ್ರು ಅಂತ ಫೋಟೋ ಮುಟ್ಟಿ ತೋರಿಸ್ತಿದ್ದಾರೆ ಬಿಜೆಪಿ ಶಾಸಕ ಮುನಿರತ್ನ(Munirathna). ಒಂದು ಕಾಲದ ಆಪ್ತಮಿತ್ರರ ಮಧ್ಯೆ ಈಗ ರಣರೋಚಕ ರಾಜಕೀಯ ಜಿದ್ದಾಜಿದ್ದಿ ಶುರುವಾಗಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್ ವಿರುದ್ಧ ಬಿಜೆಪಿ ಶಾಸಕ ಮುನಿರತ್ನ ಓಪನ್ ವಾರ್ ಶುರು ಮಾಡಿದ್ದಾರೆ. ಅನುದಾನದ ವಿಚಾರದಲ್ಲಿ ಡಿಕೆ ಬ್ರದರ್ಸ್ ವಿರುದ್ಧ ಮುನಿರತ್ನ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಉಪವಾಸ ಸತ್ಯಾಗ್ರಹ ನಡೆಸಿದ್ರು. ಸೀನ್ ಕಟ್ ಮಾಡಿದ್ರೆ, ಮುನಿರತ್ನ ಎಲ್ಲಿದ್ರು ಗೊತ್ತಾ ವೀಕ್ಷಕರೇ. ಡಿಸಿಎಂ ಡಿಕೆ ಶಿವಕುಮಾರ್ ಅವರ ಕಾಲಿಗೆ ಎರಗ್ತಾ ಇದ್ರು. ಇದ್ರ ಹಿಂದಿರೋದು ಒಂದು ಅನುದಾನದ ಕಥೆ ವೀಕ್ಷಕರೇ. ಮುನಿರತ್ನ ಅವ್ರು ಬೆಂಗಳೂರಿನ(Bengaluru) ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಶಾಸಕ. ಎರಡು ಬಾರಿ ಕಾಂಗ್ರೆಸ್‌ನಿಂದ, ಎರಡು ಬಾರಿ ಬಿಜೆಪಿಯಿಂದ.. ಹೀಗೆ ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರೋ ಸೋಲಿಲ್ಲದ ಸರದಾರ. ಕಾಂಗ್ರೆಸ್‌ನಲ್ಲಿದ್ದಾಗ(COngress) ಡಿಕೆ ಸಹೋದರರ ಅತ್ಯಂತ ಆತ್ಮೀಯರಾಗಿದ್ದ ಮುನಿರತ್ನ, ಇದೀಗ ಅದೇ ಡಿಕೆ ಅಣ್ತಮ್ಮಾಸ್ ವಿರುದ್ಧ ನಿಂತಿದ್ದಾರೆ. ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ನೀಡಲಾಗಿದ್ದ ಅನುದಾನವನ್ನು ಡಿಸಿಎಂ ಡಿಕೆ ಶಿವಕುಮಾರ್ ಬೇರೆ ಕ್ಷೇತ್ರಗಳಿಗೆ ಹಂಚಿಕೆ ಮಾಡಿದ್ದಾರೆ ಅಂತ ಮುನಿರತ್ನ ಆರೋಪಿಸಿದ್ದಾರೆ. ಇದ್ರಲ್ಲಿ ಸ್ಥಳೀಯ ಸಂಸದ ಡಿ.ಕೆ ಸುರೇಶ್ ಕೈವಾಡವೂ ಇದೆ ಅಂತ ಮುನಿರತ್ನ ನೇರ ಆರೋಪ ಮಾಡಿದ್ದಾರೆ.
ಇದನ್ನೂ ವೀಕ್ಷಿಸಿ: ಅನ್ಯ ಜಾತಿ ಯುವಕನನ್ನ ಪ್ರೀತಿಸಿದ್ದಕ್ಕೆ ಮಗಳ ಕೊಂದ ತಂದೆ..!